ಸುಳ್ಯ: ಜಾಲ್ಸೂರು ಗ್ರಾಮದ ಬೋಳುಬೈಲಿನಲ್ಲಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ‘ಪೀಸ್ ಸ್ಕೂಲ್ ಸುಳ್ಯ ತನ್ನ 10ನೇ ವರ್ಷದ ಮೈಲಿಗಲ್ಲನ್ನು ತಲುಪಿದ್ದು, ಇದರ ಪ್ರಯುಕ್ತ “10 ಔರಾ” (10 AURA) ದಶಮಾನೋತ್ಸವವನ್ನು ಹಮ್ಮಿಕೊಂಡಿದೆ.


ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ರಿಸೆಟ್ ಇಸ್ಲಾಮಿಕ್ ಸ್ಕೂಲ್ ಮತ್ತು ರಿಸೆಟ್ ಅರೇಬಿಕ್ ಮದ್ರಸ ವಿಭಾಗಗಳನ್ನು ಹೊಂದಿರುವ ಈ ಸಂಸ್ಥೆಯು, ತನ್ನ ಶೈಕ್ಷಣಿಕ ಪಯಣದ “10 ವರ್ಷಗಳ ಶ್ರೇಷ್ಠತೆ”ಯನ್ನು (10 Years of Excellence) ಈ ಕಾರ್ಯಕ್ರಮದ ಮೂಲಕ ಆಚರಿಸಿಕೊಳ್ಳುತ್ತಿದೆ.
ಕಾರ್ಯಕ್ರಮವು ಇದೇ ಬರುವ ಡಿಸೆಂಬರ್ 30, 2025 ರಂದು ನಡೆಯಲಿದ್ದು, ಸಂಜೆ 4:30 ರಿಂದ ರಾತ್ರಿ 10:30 ರವರೆಗೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಈ ವಿಶೇಷ ಸಂಭ್ರಮಾಚರಣೆಗೆ ಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಸಮಸ್ತರನ್ನು ಸ್ವಾಗತಿಸಿದ್ದಾರೆ.

