(ಎ.ಐ ಆದರಿತ ಚಿತ್ರ)

ಅರಂತೋಡು: ಇಲ್ಲಿನ ನಯಾರ (Nayara) ಪೆಟ್ರೋಲ್ ಬಂಕ್‌ನಲ್ಲಿ ಕಾರೊಂದು ಇಂಧನ ತುಂಬಿಸಿಕೊಂಡು, ಹಣ ಪಾವತಿಸದೆ ಪರಾರಿಯಾದ ಘಟನೆ ವರದಿಯಾಗಿದೆ.

ಘಟನೆಯ ವಿವರ:

ಕೇರಳದ ಕಾಸರಗೋಡು ನೋಂದಣಿ ಸಂಖ್ಯೆ ಹೊಂದಿದ್ದ ಮಾರುತಿ ಸುಜುಕಿ ಆಲ್ಟೋ 800 (Maruti Suzuki Alto 800 – KL 14 X 111) ಕಾರು ಪೆಟ್ರೋಲ್ ಬಂಕ್‌ಗೆ ಬಂದಿತ್ತು. ಚಾಲಕ ಕಾರಿಗೆ  ₹2,510 ಮೌಲ್ಯದ ಪೆಟ್ರೋಲ್ ಹಾಕಿಸಿಕೊಂಡಿದ್ದಾನೆ. ಆದರೆ ಪೆಟ್ರೋಲ್ ತುಂಬಿದ ಬಳಿಕ ಹಣ ನೀಡುವ ಬದಲು, ಚಾಲಕ ಏಕಾಏಕಿ ಕಾರನ್ನು ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ.

ಚಾಲಕ ಪರಾರಿಯಾಗುತ್ತಿದ್ದಂತೆ ಎಚ್ಚೆತ್ತ ಬಂಕ್ ಸಿಬ್ಬಂದಿಗಳು, ಕೂಡಲೇ ಮುಂದಿನ ಜಾಲ್ಸೂರು (Jalsoor) ಚೆಕ್ ಪೋಸ್ಟ್ ಬಳಿಯ ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಮಾಹಿತಿ ಅರಿತು ವಾಹನವನ್ನು ತಡೆಯಲು ಸಜ್ಜಾಗಿದ್ದರು. ಆದರೆ ಚಾಲಕ ವಾಹನವನ್ನು ನಿಲ್ಲಿಸದೆ, ಅತೀ ವೇಗವಾಗಿ ಚಲಾಯಿಸಿಕೊಂಡು ಪುತ್ತೂರು ಕಡೆಗೆ ಎಸ್ಕೇಪ್ ಆಗಿದ್ದಾನೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *