Nammasullia: ಧರ್ಮಸ್ಥಳದ ಪಾಂಗಾಳ ನಿವಾಸಿ ದಿ.ಚಂದಪ್ಪ ಗೌಡ ಹಾಗೂ ಕುಸುಮಾವತಿ ದಂಪತಿಗಳ ಪುತ್ರಿ ಎಸ್.ಡಿ.ಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯಳ ಭೀಕರ ಅತ್ಯಾಚಾರ, ಕೊಲೆ ಪ್ರಕರಣದ ನೈಜ ಅಪರಾಧಿಗಳ ಬಂಧಿಸಿ, ಕಠಿಣ ಶಿಕ್ಷೆಗೊಳಪಡಿಸಬೇಕು ಹಾಗೂ ಅವಳ ಆತ್ಮಕ್ಕೆ ಶಾಂತಿ ಹಾಗೂ ನ್ಯಾಯ ದೊರಕಲೆಂದು, ಈಗಾಗಲೇ ಸರಕಾರ ರಚಿಸಿದ ಎಸ್.ಐ.ಟಿ ತನಿಖೆ ಪಾರದರ್ಶಕ ನಡೆಯುವಂತೆ ಮತ್ತು ಸೌಜನ್ಯ ಹೋರಾಟಗಾರ ನಾಯಕ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ತೇಜೋವಧೆ ನಡೆಸಿ ಜೈಲಿಗಟ್ಟುವ ಹುನ್ನಾರಗಳು ಅಂತ್ಯವಾಗುವ ಮೂಲಕ ನ್ಯಾಯಯುತ ಹೋರಾಟಕ್ಕೆ ಗೆಲುವಾಗುವಂತೆ ಅಕ್ಟೋಬರ್ 09 ಗುರುವಾರದಂದು ಪೂರ್ವಾಹ್ನ 11 ಗಂಟೆಗೆ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನಡೆಯಿತು.
ಈ ಸಂದರ್ಭದಲ್ಲಿ ಹೋರಾಟದ ಪ್ರಮುಖ ನಾಯಕತ್ವ ವಹಿಸಿರುವ ಮಹೇಶ್ ತಿಮರೋಡಿ ಅವರ ಜೊತೆಗಾರರಾಗಿರುವ ಮಾಜಿ ಪೋಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣವರ್, ರವೀಂದ್ರ ಶೆಟ್ಟಿ, ರಾಷ್ಟ್ರೀಯ ಹಿಂದು ಜಾಗರಣ ವೇದಿಕೆ ಬೆಳ್ತಂಗಡಿ ಅಧ್ಯಕ್ಷ ಅನಿಲ್ ಕುಮಾರ್, ಚಂದ್ರಾ ಕೋಲ್ಟಾರ್, ಎನ್.ಟಿ ವಸಂತ್, ಪಿ.ಲೋಲಜಾಕ್ಷ, ರಾಘವ ಅರ್ನೋಜಿ, ನೀಲಪ್ಪ ಪೈಕ, ಭರತ್ ಕನ್ನಡ್ಕ, ದುಷ್ಯಂತ್ ಶೀರಡ್ಕ, ಧರ್ಮಪಾಲ ಅಡ್ಡನಪಾರೆ, ಸತ್ಯನಾರಾಯಣ ಬಟ್ಟೋಡಿ ಹಾಗೂ ತೀರ್ಥರಾಮ ಉಳುವಾರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.



