ದ.ಕ ಜಿಲ್ಲಾ ಸಮಿತಿ ಸಂಚಾಲಕರಾಗಿ ರಫೀಕ್ ದರ್ಬೆ ಆಯ್ಕೆ
2025ನೇ ಸಾಲಿನ ಮಕ್ಕಳ ಹಕ್ಕುಗಳ ಮಾಸೋತ್ಸವದ ಪೂರ್ವಭಾವಿ ಸಭೆ ಮತ್ತು ಕೆ.ಟಿ.ಸಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ಸಭೆ ಮಂಗಳೂರು ಪಡಿ ಸಂಸ್ಥೆಯಲ್ಲಿ ಅಕ್ಟೋಬರ್ 16 ರಂದು ನಡೆಯಿತು. ಜಿಲ್ಲೆಯಾದ್ಯಂತ ಮೂರು ತಿಂಗಳು ಸರಣಿ ಕಾರ್ಯಕ್ರಮ ದೊಂದಿಗೆ ಆಯೋಜಿಸಲ್ಪಡುವ ಮಕ್ಕಳ ಹಕ್ಕುಗಳ ಮಾಸೋತ್ಸವವನ್ನು ಯಶಸ್ವಿಯಾಗಿ ನಡೆಸುವ ಬಗ್ಗೆ ಮತ್ತು ಕಾರ್ಯ ಚಟುವಟಿಕೆಗಳ ಬಗ್ಗೆ ಪಡಿ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ರೆನ್ನಿ ಡಿಸೋಜ ರವರು ಮಾಹಿತಿ ಕಾರ್ಯಗಾರ ನಡೆಸಿದರು. ಸಂಪನ್ಮೂಲ ವ್ಯಕ್ತಿ ಶ್ರೀಮತಿ ಕಸ್ತೂರಿ ಬೊಳುವಾರು ರವರು ಮಸೋತ್ಸವದ ಉದ್ದೇಶ ಹಾಗೂ ಅದರ ಜವಾಬ್ದಾರಿಯನ್ನು ಕುರಿತು ಮಾಹಿತಿ ನೀಡಿದರು. ಬಳಿಕ 25-26 ನೇ ಸಾಲಿನ ನೂತನ ಸಮಿತಿ ರಚಿಸಲಾಯಿತು. ಜಿಲ್ಲಾ ಸಮಿತಿಯ ಸಂಚಾಲಕರಾಗಿ ರಫೀಕ್ ದರ್ಬೆ ಹಾಗೂ ಸಹ ಸಂಚಾಲಕರಾಗಿ ಪುತ್ತೂರು ಸಮಿತಿಗೆ ಶ್ರೀಮತಿ ಸುಮಂಗಲ ಶೆಣೈ, ಸುಳ್ಯ ತಾಲೂಕು ಹಸೈನಾರ್ ಜಯನಗರ, ಮಂಗಳೂರು ತಾಲೂಕು ಶ್ರೀಮತಿ ಪ್ರೇಮಿ ಫೆರ್ನಾಂಡಿಸ್ ಹಾಗೂ ಬೆಳ್ತಂಗಡಿ, ಬಂಟ್ವಾಳ ತಾಲೂಕಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ತಾಲೂಕು ಸಮಿತಿಯ ಅಧ್ಯಕ್ಷರು,ಪದಾಧಿಕಾರಿಗಳು, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರುಗಳು ಭಾಗವಹಿಸಿದ್ದರು.


