ಅಂತಾರಾಷ್ಟ್ರೀಯ ಖ್ಯಾತಿಯ ಸುಳ್ಯದ ಸಾಹಿತಿ ನಿರಂಜನರೆಂದೇ ಪ್ರಸಿದ್ಧರಾದ ಕುಲ್ಕುಂದ ಶಿವರಾಯರ ಜನ್ಮ ಶತಮಾನೋತ್ಸವದ ಪ್ರಯುಕ್ತ “ನಿರಂಜನ ಬದುಕು – ಬರಹ : ನೆನಪು” ಕಾರ್ಯಕ್ರಮವನ್ನು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಸೆಪ್ಟೆಂಬರ್ 26,2025ನೇ ಶುಕ್ರವಾರದಂದು ಹಮ್ಮಿಕೊಳ್ಳಲಾಗಿದೆ. ಕಾಲೇಜಿನ ಕನ್ನಡ ಸಂಘ ಹಾಗೂ ಕನ್ನಡ ವಿಭಾಗದ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ಹಾಗೂ ಕಾಲೇಜಿನ ಐಕ್ಯೂಎಸಿ ಆಶ್ರಯದಲ್ಲಿ ಹಮ್ಮಿಕೊಂಡ ಕಾರ್ಯಕ್ರಮವನ್ನು ಕೆನರಾ ಬ್ಯಾಂಕಿನ ನಿವೃತ್ತ ಜನರಲ್ ಮ್ಯಾನೇಜರ್ ವೆಂಕಟೇಶ್ ಕೆ ಪ್ರಭು ಅವರು ಉದ್ಘಾಟಿಸಲಿದ್ದು, ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ ಎಂ ಅಧ್ಯಕ್ಷತೆ ವಹಿಸಲಿದ್ದಾರೆ. ನಿವೃ,ತ್ತ ಪ್ರಾಂಶುಪಾಲರಾದ ಅಶೋಕ ಮೂಲೆಮಜಲು (ಸುಬ್ರಹ್ಮಣ್ಯ) ಅವರು ನಿರಂಜನರ ಬದುಕು- ಬರಹದ ಕುರಿತು ಮಾತನಾಡಲಿದ್ದಾರೆ. ಸುಳ್ಯದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರತ್ನಾವತಿ ಡಿ. ಉಪಸ್ಥಿತರಿರುತ್ತಾರೆ. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ನಿರಂಜನರ ಸಾಹಿತ್ಯ ವಿಮರ್ಶೆ ನಡೆಯಲಿದ್ದು, ನೆಹರೂ ಮೆಮೋರಿಯಲ್ ಕಾಲೇಜಿನ ಕು. ಅಂಬಿಕಾ ಎಂ ವಿ ರಂಗಮ್ಮನ ವಠಾರ ಕಾದಂಬರಿಯ ಕುರಿತು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯದ ಕು. ಭಾಗ್ಯಶ್ರೀ ಕೆ. ಡಿ ಕೊನೆಯ ಗಿರಾಕಿ ಕಥೆಯ ಕುರಿತು, ಬೆಳ್ಳಾರೆಯ ಡಾ. ಕೆ ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನ ಕು.ಆಜ್ಞಾಶ್ರೀ ರೈ ಡಿ ಚಿರಸ್ಮರಣೆ ಕಾದಂಬರಿಯ ಕುರಿತು, ಕೆ ಎಸ್ ಎಸ್ ಪದವಿ ಕಾಲೇಜು ಸುಬ್ರಹ್ಮಣ್ಯದ ಕು. ಸಂಖ್ಯಾ ಜಿ ಸಿ ಕಲ್ಯಾಣ ಸ್ವಾಮಿ ಕಾದಂಬರಿಯ ಕುರಿತು ಪ್ರಬಂಧ ಮಂಡಿಸಲಿದ್ದಾರೆ ಎಂದು ಕಾಲೇಜಿನ ಕನ್ನಡ ಸಂಘದ ಸಂಚಾಲಕರು, ಕಾರ್ಯಕ್ರಮ ಸಂಯೋಜಕರೂ ಆದ ಡಾ. ಅನುರಾಧಾ ಕುರುಂಜಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


