ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್ (ಸ) ರಾಜ್ಯವ್ಯಾಪಿ ಅಭಿಯಾನದ ಪ್ರಯುಕ್ತ ಸಾರ್ವಜನಿಕ ವಿಚಾರಗೋಷ್ಠಿ ಕಾರ್ಯಕ್ರಮವು ನ.01 ಸಂಜೆ 4 ಗಂಟೆಗೆ ಸರಿಯಾಗಿ ಲಯನ್ಸ್ ಸೇವಾ ಸದನ ಸುಳ್ಯದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ| ಮುಹಮ್ಮದ್ ಕುಞಿ (ರಾಜ್ಯ ಕಾರ್ಯದರ್ಶಿ, ಜಮಾಅತೆ ಇಸ್ಲಾಮೀ ಹಿಂದ್) ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ ಕೆ.ವಿ ಚಿದಾನಂದ ( ಅಧ್ಯಕ್ಷರು, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್), ಡಾ| ಪೂವಪ್ಪ ಕಣಿಯೂರು ( ಖ್ಯಾತ ಸಾಹಿತಿ, ಬರಹಗಾರರು), ಶ್ರೀ ಗಣೇಶ್ ಭಟ್ ಪಿ, (ಚಾರ್ಟಡ್ ಅಕೌಂಟೆಂಟ್, ಸುಳ್ಯ), ಶ್ರೀ ಲಕ್ಷ್ಮೀಶ ಗಬಲಡ್ಕ (ಸದಸ್ಯರು, ರಾಜ್ಯ ಧಾರ್ಮಿಕ ಪರಿಷತ್, ಕರ್ನಾಟಕ ಸರಕಾರ), ಶ್ರೀ ಹಿಮಕರ ಎ.ಕೆ. (ಸಾಹಿತಿ, ಸಂಶೋಧಕರು, ಗುತ್ತಿಗಾರು, ಸುಳ್ಯ) ಭಾಗವಹಿಸಲಿದ್ದಾರೆ. ಇದೊಂದು ಸರ್ವಧರ್ಮೀಯರಿಗೂ ಕಾರ್ಯಕ್ರಮವಾಗಿದ್ದು ಎಲ್ಲರಿಗೂ ಭಾಗವಹಿಸಬಹುದಾಗಿದೆ.



