Nammasullia: ಸುಳ್ಯ ನಗರದ ಪ್ರಮುಖ ಬೀದಿಗಳಲ್ಲಿ ಆರ್.ಎ.ಎಫ್ ನಿಂದ ಪಥಸಂಚಲನ ಇಂದು ನಡೆಯಿತು.
ಸುಳ್ಯ ಹಳೆಗೇಟು ನಿಂದ ಹೊರಟು ಗಾಂಧಿನಗರದವರೆಗೆ ರಪಿಡ್ ಆ್ಯಕ್ಷನ್ ಪೋರ್ಸ್ (RAF) ಮತ್ತು ಸುಳ್ಯ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳ ನೇತೃತ್ವದಲ್ಲಿ ಪಥ ಸಂಚಲನ ನಡೆಯಿತು. ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಸಾರ್ವಜನಿಕರಲ್ಲಿ ಭರವಸೆ, ಮೂಡಿಸುವ ಸಲುವಾಗಿ ಈ ಪಥಸಂಚಲನ ನಡೆಯಿತು. ಇದ್ದಕ್ಕಿದ್ದಂತೆ ಪಂಥ ಸಂಚಲನ, ವಾಹನದ ಸೈರೆನ್ ಇದನ್ನೆಲ್ಲ ನೋಡಿ ಸಾರ್ವಜನಿಕರಲ್ಲಿ ಗಾಬರಿಗೊಂಡಿದ್ದು ಅಂತು ನಿಜ.

