ಕಡಬ, ಸೆಪ್ಟೆಂಬರ್: 8 ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಡಬ ಬ್ಲಾಕ್ ಸಮಿತಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ರಮ್ಲಾನ್ ಸನ್ ರೈಸ್, ಪ್ರಧಾನ ಕಾರ್ಯದರ್ಶಿಯಾಗಿ ನಬಿಶಾನ್ ಕಳಾರ, ಉಪಾಧ್ಯಕ್ಷರಾಗಿ ಬಶೀರ್ ಆತೂರು, ಕಾರ್ಯದರ್ಶಿಯಾಗಿ ಶರೀಫ್ ಬಿ.ಎಸ್, ಕೋಶಾಧಿಕಾರಿಯಾಗಿ ನವಾಝ್ ಕಡಬ, ಸಮಿತಿ ಸದಸ್ಯರಾಗಿ ಬಶೀರ್ ಕಡಬ ಹಾಗೂ ರವೂಫ್ ಕಡಬ ರವರನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಯಿತು.ಚುನಾವಣಾ ಉಸ್ತುವಾರಿ ಗಳಾಗಿ SDPI ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿಗಳಾದ ಶಾಕಿರ್ ಅಳಿಕೆಮಜಲ್,ಅಶ್ರಫ್ ತಲಪಾಡಿಯವರು ಕಾರ್ಯನಿರ್ವಹಿಸಿದರು,
ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದಾತ್ ಬಜೆತ್ತೂರು ರವರು ನೂತನ ನಾಯಕರುಗಳಿಗೆ ತಮ್ಮ ಜವಾಬ್ದಾರಿಗಳನ್ನು ವಿವರಿಸಿದರು. ಸುಳ್ಯ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಮಿರಾಝ್ ಸುಳ್ಯ,
ಪ್ರಧಾನ ಕಾರ್ಯದರ್ಶಿ ರಫೀಕ್ ಎಂ ಎಸ್, ಮತ್ತಿತರರು ಉಪಸ್ಥಿತರಿದ್ದರು.

