
ಸುಳ್ಯ: ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜನೆ
ಸುಳ್ಯ ಗ್ರೀನ್ ವ್ಯೂ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ ಜರಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಸುಕುಮಾರ್ ಕೊಡ್ತುಗುಳಿ ಅಧ್ಯಕ್ಷರು ವಕೀಲರ ಸಂಘ ಸುಳ್ಯ ನೆರವೇರಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರೀನ್ ವ್ಯೂ ವಿದ್ಯಾ ಸಂಸ್ಥೆ ಅಧ್ಯಕ್ಷ ಅಬ್ದುಲ್ ಮಜೀದ್ ಜನತಾ ವಹಿಸಿದ್ದರು ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ಪ್ರತಿಭಾಜ್ಯೋತಿ ಪಿ ವಿ ನ್ಯಾಯವಾದಿ ಮಾತನಾಡಿ ಇತ್ತೀಚೆಗೆ ರಸ್ತೆ ಅಪಘಾತ ಗಳು ಹೆಚ್ಚಾಗುತ್ತಿದ್ದು ಯುವಕರಲ್ಲಿ, ವಿದ್ಯಾರ್ಥಿ ಗಳಲ್ಲಿ ರಸ್ತೆ ಸುರಕ್ಷತೆ ಜಾಗೃತಿ, ಟ್ರಾಫಿಕ್ ಕಾನೂನುಗಳ ಅರಿವು ಮೂಡಿಸ ಬೇಕಾಗಿದೆ ಎಂದರು ವೇದಿಕೆಯಲ್ಲಿ ಚಂದ್ರಶೇಖರ್ ಉದ್ದಂತಡ್ಕ , ಶಾಲಾ ಮುಖ್ಯ ಶಿಕ್ಷಕ ಇಲ್ಯಾಸ್ ಕಾಶಿಪಟ್ಣ, ಸಂಯೋಜಕ ಶಾಫಿ ಕುತ್ತಾಮೊಟ್ಟೆ,ಹಿರಿಯ ಶಿಕ್ಷಕಿ ಶ್ರೀಮತಿ ಜಯಂತಿ ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಶಿಕ್ಷಕ ರಂಜಿತ್ ಸ್ವಾಗತಿಸಿದರು ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ ಅಶ್ವಿನಿ ಹಾಗೂ ಶಿಕ್ಷಕಿ ಇರ್ಫಾನ ಧನ್ಯವಾದ ಸಲ್ಲಿಸಿದರು.
