ಸುಳ್ಯ: ಇಲ್ಲಿನ ಪೈಚಾರ್‌ನಲ್ಲಿರುವ ಸಲಫಿ ಜುಮಾ ಮಸೀದಿಯ ನವೀಕೃತ ಒಳಾಂಗಣದ ಉದ್ಘಾಟನಾ ಸಮಾರಂಭವು ಇದೇ ಬರುವ ಜನವರಿ 16, 2026ರ ಶುಕ್ರವಾರದಂದು ನಡೆಯಲಿದೆ ಎಂದು ಮಸೀದಿ ಆಡಳಿತ ಮಂಡಳಿ ತಿಳಿಸಿದೆ.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸಯ್ಯದ್ ಅಬ್ದುಲ್ ವಹ್ಹಾಬ್ ಮದನಿ ಅವರು ನೆರವೇರಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಪಿ. ಹೆಚ್ ಅಬ್ದುರ್ರಹ್ಮಾನ್ ಅವರು ವಹಿಸಲಿದ್ದಾರೆ.
ಅಂದಿನ ಜುಮಾ ಖುತುಬಾವನ್ನು ಯಾಸಿರ್ ಮದನಿ ಪಗರ ಅವರು ನಿರ್ವಹಿಸಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಸಂಜೆ ಮಗ್ರಿಬ್ ನಮಾಜಿನ ಬಳಿಕ ವಿಶೇಷ ‘ತಝ್ಕಿಯಾ ಕ್ಲಾಸ್’ ನಡೆಯಲಿದ್ದು, ಅಸ್ಕರ್ ಇಬ್ರಾಹಿಂ ಒಟ್ಟಪ್ಪಾಲಂ ಅವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಸರ್ವರಿಗೂ ಆದರದ ಸ್ವಾಗತವನ್ನು ಆಯೋಜಕರು ಕೋರಿದ್ದಾರೆ.

Leave a Reply

Your email address will not be published. Required fields are marked *