ಸಂಪಾಜೆ: ಇಲ್ಲಿನ ಗ್ರಾಮದ ಕಡೆಪಾಲದ ಕೊಚ್ಚಿ-ಆಲಿಗುಡ್ಡೆ ತಿರುವಿನ ಬಳಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕ.ರಾ.ರ.ಸಾ.ನಿ) ಗ್ರಾಮಾಂತರ ಬಸ್ಸುಗಳಿಗೆ ನಿಲುಗಡೆ (ಸ್ಟಾಪ್) ನೀಡುವಂತೆ ಒತ್ತಾಯಿಸಿ, ಸ್ಥಳೀಯರು ಸಂಪಾಜೆ ಗ್ರಾಮ ಪಂಚಾಯತ್‌ಗೆ ಮನವಿ ಸಲ್ಲಿಸಿದ್ದಾರೆ.


ಈ ಪ್ರದೇಶದಲ್ಲಿ ಬಸ್ ನಿಲುಗಡೆಗೆ ಕೋರಿ ಕಳೆದ ಎರಡುವರೆ ವರ್ಷಗಳಿಂದ ನಿರಂತರವಾಗಿ ಲಿಖಿತ ಹಾಗೂ ಮೌಖಿಕವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಾ ಬರಲಾಗಿದೆ. ಆದರೂ, ಇದುವರೆಗೆ ಯಾವುದೇ ಸಕಾರಾತ್ಮಕ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ, ಗ್ರಾಮಸ್ಥರು ಇದೀಗ ಮತ್ತೊಮ್ಮೆ ಗ್ರಾಮ ಪಂಚಾಯತ್ ಮೂಲಕ ಮನವಿ ಸಲ್ಲಿಸಿ, ತುರ್ತು ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಈ ಭಾಗದ ಜನರ ಅನುಕೂಲಕ್ಕಾಗಿ ಕೂಡಲೇ ಬಸ್ ನಿಲುಗಡೆಗೆ ವ್ಯವಸ್ಥೆ ಮಾಡಬೇಕೆಂದು ಮನವಿಯಲ್ಲಿ ಕೋರಲಾಗಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಫಾರೂಕ್ ಕಾನಕ್ಕೋಡ್, ಹಾಗೂ ಸ್ಥಳೀಯ ಪ್ರಮುಖರಾದ ಸಂಶುದ್ದೀನ್ ಕಡೆಪಾಲ, ಅಜಿಮ್ ಕಲ್ಲುಗುಂಡಿ ಮತ್ತು ಮಶೂದ್ ಕಾನಕ್ಕೋಡ್ ಉಪಸ್ಥಿತರಿದ್ದರು.



