
ಶಿಸ್ತು ಮತ್ತು ಸೇವೆಯ ವ್ಯಕ್ತಿತ್ವ ರೂಪಿಸಿಕೊಳ್ಳಲು ಸ್ಕೌಟ್ಸ್ & ಗೈಡ್ಸ್ ಸಹಕಾರಿ: ತಿಮ್ಮಪ್ಪ ನಾಯ್ಕ್
ಭಾರತ್ ಸ್ಕೌಟ್ಸ್ & ಗೈಡ್ಸ್ ಕರ್ನಾಟಕ ಸ್ಥಳೀಯ ಸಂಸ್ಥೆ ಮತ್ತು ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆ ಜಂಟಿ ಆಶ್ರಯದಲ್ಲಿ ಸುಳ್ಯ ತಾಲೂಕು ಮಟ್ಟದ ಸ್ಕೌಟ್ಸ್ & ಗೈಡ್ಸ್ ಮತ್ತು ಕಬ್, ಬುಲ್ ಬುಲ್ ಉತ್ಸವಕ್ಕೆ ಚಾಲನೆಗೊಂಡಿದೆ
ಸುಳ್ಯ ಶಾಸ್ತ್ರಿ ಸರ್ಕಲ್ ನಿಂದ ಸುಳ್ಯ ತಾಲೂಕಿನ ವಿವಿಧ ಶಾಲೆಗಳ ಸುಮಾರು 450 ಕ್ಕೂ ಮಿಕ್ಕಿ ಸಮವಸ್ತ್ರ ದಲ್ಲಿ ಪಾಲ್ಗೊಂಡ ವಿದ್ಯರ್ಥಿಗಳ ರ್ರ್ಯಾಲಿ ಯನ್ನು ಸುಳ್ಯ ಪೊಲೀಸ್ ವೃತ್ತ ನಿರೀಕ್ಷರಾದ ತಿಮ್ಮಪ್ಪ ನಾಯ್ಕ್ ಹಸಿರು ನಿಶಾನೆ ತೋರಿಸಿ ಶಿಸ್ತು ಮತ್ತು ರಸ್ತೆ ಸುರಕ್ಷತೆ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಸುಳ್ಯ ಪೊಲೀಸ್ ಉಪ ನಿರೀಕ್ಷರಾದ ಸಂತೋಷ್ ಬಿ. ಪಿ. ಮತ್ತು ಸಿಬ್ಬಂದಿ ಗಳು ಉಪಸ್ಥಿತರಿದ್ದರು. ನಂತರ ಗ್ರೀನ್ ವ್ಯೂ ವಿದ್ಯಾ ಸಂಸ್ಥೆಯ ಸಭಾಂಗಣ ದಲ್ಲಿ ನಡೆದ ಸಮಾವೇಶದ ಉದ್ಘಾಟನಾ ಸಮಾರಂಭ ದ ಅಧ್ಯಕ್ಷ ತೆಯನ್ನು ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಮಜೀದ್ ಜನತಾ ವಹಿಸಿದ್ದರು. ಸಮಾರಂಭ ವನ್ನು ಸುಳ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾoಶುಪಾಲ ಸತೀಶ್ ಕೊಯಿoಗಾಜೆ ಉದ್ಘಾಟನೆ ಮಾಡಿದರು. ಮುಖ್ಯ ಅತಿಥಿಗಳಾಗಿ ಗ್ರೀನ್ ವ್ಯೂ ಸಂಚಾಲಕ, ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ) ಅಧ್ಯಕ್ಷ ಕೆ. ಎಂ. ಮುಸ್ತಫ, ಸುಳ್ಯ ಕ್ಷೇತ್ರ ಶಿಕ್ಷಣಾ ಧಿಕಾರಿ ಶ್ರೀಮತಿ ಶೀತಲ್ ಯು. ಕೆ ಸುಳ್ಯ ತಾಲೂಕು ದೈಹಿಕ ಶಿಕ್ಷಕರ ಪರಿವೀಕ್ಷಣಾ ಧಿಕಾರಿ ಸೂಫಿ ಪೆರಾಜೆ, ಗ್ರೀನ್ ವ್ಯೂ ಶಾಲಾ ಸಂಯೋಜಕರುಗಳಾದ ಕೆ. ಎಸ್. ಉಮ್ಮರ್, ಶಾಫಿ ಕುತ್ತಾಮೊಟ್ಟೆ, ನಿರ್ದೇಶಕರು ಗಳಾದ ಸಾಲಿ ಕಟ್ಟೆಕ್ಕಾರ್ಸ್, ವರ್ತಕರ ಸಂಘದ ಅಧ್ಯಕ್ಷ ಕೆ. ಎಂ. ಅಬ್ದುಲ್ ಹಮೀದ್, ಮುಖ್ಯ ಶಿಕ್ಷಕ ಇಲ್ಯಾಸ್ ಕೆ ಕಾಶಿಪಟ್ಟಣ ಜನತಾ, ಸ್ಕೌಟ್ಸ್ & ಗೈಡ್ಸ್ ಪದಾಧಿಕಾರಿಗಳಾದ ರಾಜು ಪಂಡಿತ್, ಮಾಧವ ಮಾಸ್ಟರ್, ಪ್ರೇಮಲತಾ ಎ. ಹೆಚ್ ಮೊದಲಾದವರು ಉಪಸ್ಥಿತರಿದ್ದರು. ಭಾರತ್ ಸ್ಕೌಟ್ಸ್ & ಗೈಡ್ಸ್ ಸ್ಥಳೀಯ ಸಂಸ್ಥೆ ಸುಳ್ಯ ಇದರ ಅಧ್ಯಕ್ಷ ಶಶಿಧರ್ ಎಂ. ಜೆ ಸ್ವಾಗತಿಸಿ ವಿಷಯ ಪ್ರಸ್ತಾವನೆ ಗೈದರು.







