ಕಡಬ, ಜುಲೈ28 : ಮತದಾರರ ಪಟ್ಟಿ ಪರಿಷ್ಕರಣೆ ಮಾಡದೆ, ವಾರ್ಡುಗಳ ಮರು ವಿಂಗಡಣೆ ಮಾಡದೆ ತರಾತುರಿಯಲ್ಲಿ ಕಡಬ ಪಟ್ಟಣ ಪಂಚಾಯತ್ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಇದು ಮತದಾರರಿಗೆ ಗೊಂದಲಮಯ ವಾತಾವರಣ ಸೃಷ್ಟಿಸಿದೆ. ಹಾಗಾಗಿ ಕಡಬ ಪಟ್ಟಣ ಪಂಚಾಯತ್ ಚುನಾವಣೆ ಮುಂದೂಡಬೇಕೆಂದು ಆಗ್ರಹಿಸಿ ಕಡಬ ತಹಶೀಲ್ದಾರರಿಗೆ ಎಸ್‌ಡಿಪಿಐ ಸುಳ್ಯ ವಿಧಾನಸಭಾ ಸಮಿತಿ ಅಧ್ಯಕ್ಷರಾದ ಮೀರಾಝ್ ಸುಳ್ಯ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

ಇದು ಕಾಟಾಚಾರಕ್ಕೋಸ್ಕರ ನಡೆಸುವ ಚುನಾವಣೆ ತರ ಕಾಣುತ್ತಿದೆ.
ಉಚ್ಚ ನ್ಯಾಯಾಲಯಗಳ ಅಭಿಪ್ರಾಯಗಳನ್ನು ಮತ್ತು, ನಿರ್ದೇಶನಗಳನ್ನು ಗಾಳಿಗೆ ತೂರಿ, ಮತದಾರರ ಪಟ್ಟಿಯ ಕರಡು ಪ್ರತಿಗಳನ್ನು ಸಾರ್ವಜನಿಕರಿಗೆ ಬಿಡುಗಡೆಗೊಳಿಸದೆ, ವಾರ್ಡುಗಳನ್ನು ಸರಿಯಾದ ರೀತಿಯಲ್ಲಿ ವಿಂಗಡನೆ ಮಾಡದೆ
ನೇರವಾಗಿ ಚುನಾವಣಾ ಪ್ರಕ್ರಿಯೆಗೆ ಇಲಾಖೆ ಮುಂದಾಗಿರುವುದಕ್ಕೆ SDPI ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಮಿರಾಝ್ ಸುಳ್ಯರವರು
ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರಜಾ ಸತಾತ್ಮಕ ರೀತಿಯಲ್ಲಿ ‌ ಚುನಾವಣೆ ನಡೆಸಲು , ಈ ಚುನಾವಣೆಯನ್ನು ಮುಂದೂಡಬೇಕೆಂದು ಕಡಬ ತಹಸೀಲ್ದಾರರಿಗೆ ಮನವಿ ಮಾಡಿದರು. ಈ ಸಂದರ್ಭದಲ್ಲಿ
ಜಿಲ್ಲಾ ಸಮಿತಿಯ ಸದಸ್ಯರಾದ ಆನಂದ ಮಿತ್ತಬೈಲು, ಕ್ಷೇತ್ರ ಸಮಿತಿಯ ಉಪಾಧ್ಯಕ್ಷರಾದ ವಿಕ್ಟರ್ ಮಾರ್ಟಿಸ್, ಕಡಬ ಬ್ಲಾಕ್ ಅಧ್ಯಕ್ಷರಾದ ಬಶೀರ್ ಕಡಬ, ಸದಸ್ಯರಾದ ಹಾರಿಸ್ ಕಳಾರ, ಟೌನ್ ಸಮಿತಿಯ ಅಧ್ಯಕ್ಷರಾದ ನವಾಜ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *