ಸಂಪಾಜೆ SDPI ಯಲ್ಲಿ ಭಿನ್ನಮತ ಸ್ಫೋಟ, SDPI ಯ ಹಲವಾರು ನಾಯಕರುಗಳು ಪಕ್ಷದ ಸೈದ್ಧಾಂತಿಕ ಭಿನ್ನಾಅಭಿಪ್ರಾಯಗಳ ಕಾರಣ ರಾಜಿನಾಮೆ, ಅನ್ನುವ ವರದಿಯು ಸತ್ಯಕ್ಕೆ ದೂರವಾಗಿದ್ದು, ಮಾಧ್ಯಮಗಳು ತಮ್ಮ ವರದಿಯ ವಸ್ತುನಿಷ್ಠತೆಯನ್ನು ಕಾಪಾಡಿಕೊಳ್ಳಬೇಕು, ಸಂಪಾಜೆ ಬ್ರಾಂಚ್ ನಾಯಕರಾದ ಸಾಜಿದ್ ಐಜಿ, ಯವರು ಪಕ್ಷದ ಪ್ರಾಥಮಿಕ ಸದಸ್ಯತನಕ್ಕೆ ವ್ಯಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ರಾಜಿನಾಮೆ ಪತ್ರವನ್ನು ಸಮಿತಿಗೆ ನೀಡಿರುತ್ತಾರೆ,ರಾಜೀನಾಮೆ ಪತ್ರದಲ್ಲಿ ನನಗೆ ಪಕ್ಷದಲ್ಲಿ ನೀಡಿದ ಜವಾಬ್ದಾರಿಗಳಿಗೆ ಮತ್ತು ಪಕ್ಷದ ಚಟುವಟಿಕೆಗಳಲ್ಲಿ ಸಹಕರಿಸಿದ ಎಲ್ಲಾ ನಾಯಕ ಕಾರ್ಯಕರ್ತರುಗಳಿಗೆ ಕೃತಜ್ಞತೆಯನ್ನು ಕೂಡ ಹೇಳಿರುತ್ತಾರೆ. ಸೈದ್ಧಾಂತಿಕ ಭಿನ್ನಾಭಿಪ್ರಾಯ ಅನ್ನುವ ಕೆಲವು ಮಾಧ್ಯಮಗಳ ವರದಿಯು ತಪ್ಪು ಸಂದೇಶವನ್ನು ನೀಡುತ್ತದೆ. ಪಕ್ಷದ ಕಾರ್ಯಕರ್ತರಲ್ಲದ ಕೆಲವರ ಭಾವಚಿತ್ರಗಳನ್ನು ಕೂಡ ಮಾಧ್ಯಮಗಳಲ್ಲಿ ಪ್ರಕಟಿಸಿರುವುದು ಕಂಡುಬಂದಿರುತ್ತದೆ ಎಂದು SDPI ಸುಳ್ಯ ಬ್ಲಾಕ್ ಅಧ್ಯಕ್ಷರಾದ ಸಿದ್ದೀಕ್ ಸಿ ಎ ಮಾಧ್ಯಮಕ್ಕೆ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *