ಸುಳ್ಯ (ಆಗಸ್ಟ್ 18):ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯಬ್ಲಾಕ್ ಸಮಿತಿಯ ಮಾಸಿಕ ಸಭೆಯು ಆಗಸ್ಟ್ 18ರಂದು ಪಕ್ಷದ ಕಚೇರಿಯಲ್ಲಿ ಸಿದ್ದಿಕ್ ಸಿ ಎ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ನಗರ ವ್ಯಾಪ್ತಿಯ ಹಲವು ವಾರ್ಡ್ ಗಳಲ್ಲಿ ಮೂಲಭೂತ ಸೌಕರ್ಯಗಳ ಸಮಸ್ಯೆಗಳಿದ್ದು ಅದರ ಬಗ್ಗೆ ಧೀರ್ಘ ಚರ್ಚೆ ನಡೆಯಿತು. ಮುಂದಿನ ಸ್ಥಳೀಯಾಡಳಿತ ಚುನಾವಣೆಯಲ್ಲಿ ಪಕ್ಷದ ಭಾಗವಹಿಸುವಿಕೆಯ ಬಗ್ಗೆ ಚರ್ಚಿಸಲಾಯಿತು
ಸಭೆಯಲ್ಲಿ ಉಪಾದ್ಯಕ್ಷ್ಯರಾದ ಸಲೀಂ ಗೂನಡ್ಕ ರವರು ಉಪಸ್ಥಿತರಿದ್ದರು. ಸಿದ್ದಿಕ್ ಸಿ ಎ ಪ್ರಾಸ್ತಾವಿಕ ಮಾತನಾಡಿ ಕಾರ್ಯದರ್ಶಿ ಸುಹೈಲ್ ವಂದನೆ ಮಾಡಿದರು.