ಭಾನುವಾರ ನಡೆದ 2025ರ ಆಫ್ರಿಕನ್ ಕಪ್ ಆಫ್ ನೇಷನ್ಸ್ (AFCON) ಫೈನಲ್ ಪಂದ್ಯದಲ್ಲಿ ಸೆನೆಗಲ್ ತಂಡವು ಆತಿಥೇಯ ಮೊರಾಕೊ ವಿರುದ್ಧ 1-0 ಗೋಲುಗಳ ರೋಚಕ ಜಯ ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ನಿಗದಿತ ಸಮಯದಲ್ಲಿ ಎರಡೂ ತಂಡಗಳು ಗೋಲು ಗಳಿಸಲು ವಿಫಲವಾದವು. ಆದರೆ ಹೆಚ್ಚುವರಿ ಸಮಯದಲ್ಲಿ (Extra Time) ಸೆನೆಗಲ್ ಆಟಗಾರ ಪಾಪೆ ಗಯೇ (Pape Gueye) ನಿರ್ಣಾಯಕ ಗೋಲು ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು. ಪಂದ್ಯದ ಕೊನೆಯಲ್ಲಿ ಮೊರಾಕೊ ತಂಡಕ್ಕೆ ಪೆನಾಲ್ಟಿ ನೀಡಿದ್ದನ್ನು ವಿರೋಧಿಸಿ ಸೆನೆಗಲ್ ಆಟಗಾರರು ಮೈದಾನದಿಂದ ಹೊರನಡೆದಿದ್ದರು. ಆದರೆ, ಕೆಲವೇ ಕ್ಷಣಗಳಲ್ಲಿ ಮೈದಾನಕ್ಕೆ ಮರಳಿದ ಅವರು ಆಟ ಮುಂದುವರಿಸಿದರು. ಸೆನೆಗಲ್ ಗೋಲ್ಕೀಪರ್ ಎಡ್ವರ್ಡ್ ಮೆಂಡಿ (Edouard Mendy) ಅವರು ಮೊರಾಕೊದ ಬ್ರಾಹಿಂ ಡಿಯಾಜ್ ಹೊಡೆದ ಪೆನಾಲ್ಟಿಯನ್ನು ಅದ್ಭುತವಾಗಿ ತಡೆದರು.ಇದು ಸೆನೆಗಲ್ ತಂಡಕ್ಕೆ ದೊರೆತ ಎರಡನೇ ಆಫ್ರಿಕನ್ ಕಪ್ ಆಫ್ ನೇಷನ್ಸ್ ಪ್ರಶಸ್ತಿಯಾಗಿದೆ. ಇದಕ್ಕೂ ಮೊದಲು 2021ರಲ್ಲಿ ಈ ಸಾಧನೆ ಮಾಡಿದ್ದರು.

