
ಸಮಸ್ತ ಶತಮಾನೋತ್ಸವ ಅಂತಾರಾಷ್ಟ್ರೀಯ ಸಮ್ಮೇಳನ ಪ್ರಚಾರದ ಪ್ರಯುಕ್ತ SKSSF ಸುಳ್ಯ ವಲಯದ ವತಿಯಿಂದ ಸಮಸ್ತ ಶತಾಬ್ಧಿ ಪ್ರಚಾರ ಸಮ್ಮೇಳನವು ಸುಳ್ಯದ ಗಾಂಧೀನಗರ ಪೆಟ್ರೋಲ್ ಪಂಪ್ ಬಳಿ ಮಂಗಳವಾರ ನಡೆಯಿತು. ಆದರ್ಶ ಪರಿಶುದ್ಧತೆ ಶತಮಾನಗಳಿಂದ ಎಂಬ ಧ್ಯೇಯದೊಂದಿಗೆ ನಡೆದ ಬೃಹತ್ ಕಾರ್ಯಕ್ರಮಕ್ಕೆ SNEC ರಾಜ್ಯ ಛೇರ್ಮನ್ ಆದ ಬಹು ಸಯ್ಯಿದ್ ಅಕ್ರಂ ಅಲಿ ತಂಙಳ್ ದುವಾ ಮೂಲಕ ಚಾಲನೆ ನೀಡಿದರು.ಕಾರ್ಯಕ್ರಮವನ್ನು ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಬಹು ಶೈಖುನಾ ಅಬ್ದುಲ್ ಖಾದರ್ ಖಾಸಿಮಿ ಬಂಬ್ರಾಣ ಉಸ್ತಾದ್ ಉದ್ಘಾಟಿಸಿದರು.ಬಹು ಸ್ವಲಾಹುದ್ದೀನ್ ಫೈಝಿ ವಲ್ಲಪುಝ ಮುಖ್ಯ ಪ್ರಭಾಷಣವನ್ನು ನಡೆಸಿ ಸಮಸ್ತದ ಆದರ್ಶತೆ ಹಾಗೂ ಸದುದ್ದೇಶಗಳ ಬಗ್ಗೆ ಮಾತಾಡಿದರು. ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಬಹು ಅಬ್ದುಲ್ಲ ಫೈಝಿ ಕೊಡಗು ಸಮಸ್ತ ನಡೆದು ಬಂದ ಹಾದಿಯ ಬಗ್ಗೆ ವಿವರಿಸಿದರು. SKSSF ಕರ್ನಾಟಕ ರಾಜ್ಯಾಧ್ಯಕ್ಷರಾದ ಬಹು ಅನೀಸ್ ಕೌಸರಿ ಉಸ್ತಾದ್ ಸಮಸ್ತ ಶತಮಾನತ್ಸವದ ಸಂಭ್ರಮದ ಬಗ್ಗೆ ಮಾತಾಡಿದರು. SKSSF ದ.ಕ ಈಸ್ಟ್ ಜಿಲ್ಲೆಯ ಅಧ್ಯಕ್ಷರಾದ ಬಹು ಮುಹಮ್ಮದ್ ನವವಿ ಮುಂಡೋಳೆ ಉಸ್ತಾದರು ಅನುಗ್ರಹ ಪ್ರಭಾಷಣಗೈದರು.ಸಮಸ್ತ ಶತಾಬ್ಧಿ ಪ್ರಚಾರ ಸಮ್ಮೇಳನ ಸುಳ್ಯ ಇದರ ಸ್ವಾಗತ ಸಮೀತಿಯ ಅಧ್ಯಕ್ಷರಾದ ಜನಾಬ್ ಹಾಜಿ ಅಬ್ದುಲ್ ಖಾದರ್ ಬಾಯಂಬಾಡಿ ಅಧ್ಯಕ್ಷತೆ ವಹಿಸಿದರು. ಕರ್ನಾಟಕ ರಾಜ್ಯ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ ಜನಾಬ್ ಟಿ.ಎಂ ಶಹೀದ್ ತೆಕ್ಕಿಲ್ ಮಾತನಾಡಿ ಸಮಸ್ತ ಶತಮಾನೋತ್ಸವ ಸಂಭ್ರಮಕ್ಕೆ ಶುಭ ಹಾರೈಸಿದರು. ಬಹು ಅಬ್ದುಲ್ ಮಜೀದ್ ದಾರಿಮಿ ಪಯ್ಯಕ್ಕಿ, ಹಾಜಿ ಅಬೂಬಕ್ಕರ್ ಮಂಗಳ, ಕೆ.ಎಂ ಮುಸ್ತಫಾ ಜನತಾ, ಆದಂ ಹಾಜಿ ಕಮ್ಮಾಡಿ, ಬಹು ತಾಜುದ್ದೀನ್ ರಹ್ಮಾನಿ, ಎಸ್.ಎ ಹಮೀದ್ ಹಾಜಿ ಸುಳ್ಯ, ತಾಜ್ ಮುಹಮ್ಮದ್ ಸಂಪಾಜೆ, ಹಾಜಿ ಅಬ್ಬಾಸ್ ಸಂಟ್ಯಾರ್, ಹಾಜಿ ಅಬ್ದುಲ್ಲ ಪಳ್ಳಿಕೆರೆ, ಕೆ.ಎಸ್ ಉಮ್ಮರ್ ಸುಳ್ಯ, ಶರೀಫ್ ಕಂಠಿ, ಹಾಜಿ ಅಶ್ರಫ್ ಗುಂಡಿ,ಇಕ್ಬಾಲ್ ಎಲಿಮಲೆ, ಮೂಸಾ ಪೈಂಬಚ್ಚಾಲ್, ಇಕ್ಬಾಲ್ ಬಾಳಿಲ, ಅಬ್ಬಾಸ್ ಪಾಲ್ತಾಡ್, ಹನೀಫ್ ಎಸ್.ಕೆ, ಹಾಜಿ ಇಬ್ರಾಹಿಂ ಮಂಡೆಕೋಲು, ಅಶ್ರಫ್ ಶೇಡಿಗುಂಡಿ, ಮನ್ಸೂರ್ ಅಸ್ಲಮಿ ಅಂಚಿನಡ್ಕ, ಜಿ.ಕೆ ಹಮೀದ್ ಸಂಪಾಜೆ, ಜಮಾಲುದ್ದೀನ್ ಕೆ.ಎಸ್, ಇರ್ಷಾದ್ ಬದ್ರಿಯಾ, ಶಮೀಮ್ ಅರ್ಶದಿ, ಖಾದರ್ ಫೈಝಿ ಐವರ್ನಾಡು,ಶರೀಫ್ ಜಟ್ಟಿಪಳ್ಳ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.SKSSF ಸುಳ್ಯ ವಲಯದ ಅಧ್ಯಕ್ಷರಾದ ಅಬೂಬಕ್ಕರ್ ಪೂಪಿಯವರು ಪ್ರಾಸ್ತಾವಿಕದ ಜೊತೆಗೆ
ಸ್ವಾಗತಿಸಿದರು. ಖಾದರ್ ಮೊಟ್ಟೆಂಗಾರ್ ಧನ್ಯವಾದಗೈದರು.



