ಉಪಗ್ರಹ ಆಧಾರಿತ ಬೋಧನೆ ಸೌಲಭ್ಯ
ಪ್ರಶ್ನೆ ಪತ್ರಿಕೆ ಕೌಶಲ್ಯಾಭಿವೃದ್ಧಿ, ಮೌಲ್ಯಧಾರಿತ ಕಲಿಕೆಗೆ ಆಡಿಯೋ ವಿಡಿಯೋ ಕ್ಲಾಸ್ ರೂಮ್ ಅವಶ್ಯಕ :ಅನ್ವರ್ ಹುಬ್ಬಳ್ಳಿ


ಸುಳ್ಯ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ ಮೀಫ್ ಶೈಕ್ಷಣಿಕ ಒಕ್ಕೂಟ ದಾನಿಗಳಾದ ಉದ್ಯಮಿ ಭಾರತ್ ಮುಸ್ತಫ ಮಂಗಳೂರು ಇವರು ಕೊಡುಗೆಯಾಗಿ ನೀಡಿದ ಸ್ಮಾರ್ಟ್ ಕ್ಲಾಸ್ ಡಿಜಿಟಲ್ ಟಿ. ವಿ. ಯನ್ನು ಅಳವಡಿಸಿ ಹುಬ್ಬಳ್ಳಿ ಡಿಜಿಟೆಕ್ ಎಂ ಡಿ ಅನ್ವರ್ ರವರು ಶಾಲಾ ಶಿಕ್ಷಕರಿಗೆ ಬಳಕೆಯ ವಿಧಾನ ಗಳನ್ನು, ಸಾಫ್ಟ್ ವೆರ್ ಕಂಟೆಂಟ್, ಉಪಗ್ರಹ ಆಧಾರಿತ ಬೋಧನೆ ಮೊದಲಾದ ವಿಷಯಗಳ ಬಗ್ಗೆ ತರಬೇತಿ ನೀಡಿದರು. 3 ವರ್ಷಗಳ ನಿರ್ವಹಣೆ ಮತ್ತು ಮಾರ್ಗದರ್ಶನ ವನ್ನು ಡಿಜಿಟೆಕ್ ಸಂಸ್ಥೆ ವಹಿಸಿ ಕೊಂಡಿರುತ್ತದೆ. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಇಲ್ಯಾಸ್ ಕಾಶಿಪಟ್ಟಣ, ಶಿಕ್ಷಕರುಗಳಾದ ಜಯಂತಿ ಕಂಪ್ಯೂಟರ್ ಶಿಕ್ಷಕಿ ಉಷಾ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *