ಪ್ರಥಮ ಫಾರ್ಝಾನ ಗುತ್ತಿಗಾರ್, ದ್ವಿತೀಯ ಸೋಹಾ ಫಾತಿಮಾ ಕಟ್ಟೆಕಾರ್, ತೃತೀಯ ಅಹಿಲ್ ಅಹಮದ್ ಗುರುಂಪು
ಸುಳ್ಯ: SSF ಸುಳ್ಯ ಸೆಕ್ಟರ್ ವತಿಯಿಂದ ಇಸ್ಲಾಮಿಕ್ ಕ್ಯಾಲೆಂಡರ್‌ನ ಹೊಸ ವರ್ಷ ಮುಹರ್ರಂ ಹಿನ್ನೆಲೆಯಲ್ಲಿ “ಮುಹರ್ರಂ” ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸೆಕ್ಟರ್ ಅಧೀನದ ವಿವಿಧ ಯುನಿಟ್‌ಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಸುಮಾರು 35ಕ್ಕೂ ಹೆಚ್ಚು ಸ್ಪರ್ಧಾರ್ಥಿಗಳು ಈ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ನುರಿತ ತೀರ್ಪುಗಾರರಿಂದ ಪ್ರಬಂಧಗಳ ಮೌಲ್ಯಮಾಪನದ ನಂತರ ವಿಜೇತರನ್ನು ಆಯ್ಕೆ ಮಾಡಲಾಯಿತು.
ವಿಜೇತರ ವಿವರಗಳು:
ಪ್ರಥಮ ಸ್ಥಾನ: ಫಾರ್ಝಾನ ಗುತ್ತಿಗಾರ್, ದ್ವಿತೀಯ ಸ್ಥಾನ: ಸೋಹಾ ಫಾತಿಮಾ ಕಟ್ಟೆಕಾರ್, ತೃತೀಯ ಸ್ಥಾನ: ಅಹಿಲ್ ಅಹಮದ್ ಗುರುಂಪು.
SSF ಸುಳ್ಯ ಸೆಕ್ಟರ್ ಸಂಘಟಕರು ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ, ವಿಜೇತರನ್ನು ಅಭಿನಂದಿಸಿದರು.


