ಸುಳ್ಯ:- ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ SSF ಸುಳ್ಯ ಸೆಕ್ಟರ್ ವತಿಯಿಂದ ಕ್ಯಾಂಪಸ್ ಇಫ್ತಾರ್ ಮೀಟ್ ಕಾರ್ಯಕ್ರಮ ವು ಮಾರ್ಚ್ 15 ರಂದು ಶನಿವಾರ ಅನ್ಸಾರ್ ಕಾಂಪ್ಲೆಕ್ಸ್ ಸುನ್ನಿ ಸೆಂಟರ್ ಸುಳ್ಯದಲ್ಲಿ ನಡೆಯಿತು, ಸೆಕ್ಟರ್ ಅಧೀನದ ಯೂನಿಟ್ ಗಳಿಂದ ಸುಮಾರು 52 ರಷ್ಟು ಕ್ಯಾಂಪಸ್ ವಿಧ್ಯಾರ್ಥಿಗಳು ಭಾಗವಹಿಸಿದ್ದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೆಕ್ಟರ್ ಅಧ್ಯಕ್ಷರಾದ ಆಬಿದ್ ಕಲ್ಲುಮುಟ್ಲು ವಹಿಸಿದ್ದರು, ಪ್ರಧಾನ ಕಾರ್ಯದರ್ಶಿ ಸಲ್ಮಾನ್ ಹಿಮಮಿ ಸರ್ವರನ್ನು ಸ್ವಾಗತಿಸಿದರು, ಕೋಶಾಧಿಕಾರಿ ನಾಸಿರ್ ವಂದಿಸಿದರು, ಸೆಕ್ಟರ್ ಕ್ಯಾಪಂಸ್ ಕಾರ್ಯದರ್ಶಿ ಕಮಾಲ್, ಸೆಕ್ಟರ್ ನಾಯಕರು, ಯೂನಿಟ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
