ಏಳು ಜಿಲ್ಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆ ನಡೆಸುತ್ತಿರುವ ಮುಸ್ಲಿಂ ಶೈಕ್ಷಣಿಕ ಸಂಸ್ಥೆಗಳ ಒಕ್ಕೂಟ ( ಮೀಫ್ ) ಮಂಗಳೂರು ಕೇಂದ್ರ ಕಚೇರಿ ಆಶ್ರಯದಲ್ಲಿ
ಸುಳ್ಯ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆ, ಜಮೀಯ್ಯತ್ತುಲ್ ಫಲಾಹ್ ಸುಳ್ಯ ಘಟಕ ದ ಸಹಬಾಗಿತ್ವ ದಲ್ಲಿ ಸುಳ್ಯ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯ ಸಭಾಂಗಣ ದಲ್ಲಿ ಸುಳ್ಯ ತಾಲೂಕಿನ 11 ಹೈಸ್ಕೂಲ್ ಗಳ 140 ವಿದ್ಯಾರ್ಥಿ ಗಳಿಗೆ 2 ದಿನಗಳ ಸುಳ್ಯ ತಾಲೂಕು ಮಟ್ಟದ ಎಸ್ ಎಸ್ ಎಲ್ ಸಿ ಕಾರ್ಯಾಗಾರ ವನ್ನು ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಶೀತಲ್ ಯು. ಕೆ. ಉದ್ಘಾಟಿಸಿದರು
ಅಧ್ಯಕ್ಷತೆಯನ್ನು ಗ್ರೀನ್ ವ್ಯೂ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಮಜೀದ್ ಜನತಾ ವಹಿಸಿದ್ದರು
ದಿಕ್ಸುಚಿ ಭಾಷಣ ಮಾಡಿದ ಮೀಫ್ ಅಧ್ಯಕ್ಷ ಮೂಸಬ್ಬ ಪಿ ಬ್ಯಾರಿ ಮಾತನಾಡಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಗಳ ತರಬೇತಿ ಉತ್ತಮ ಕಳೆದ ವರ್ಷ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನಿಯಾಗಳು ಸಹಕಾರಿಯಾಗಿದೆ ಎಂದರು ಈ ಎಲ್ಲಾ ಕಾರ್ಯಕ್ರಮ ಗಳು ಶಾಲಾ ಶಿಕ್ಷಣ ಇಲಾಖೆಯ ಮಾರ್ಗದರ್ಶನ ಮತ್ತು ಸಹಕಾರ ದೊಂದಿಗೆ ನಡೆಯುತ್ತಿದ್ದು ಇಲಾಖೆಯ ಅಧಿಕಾರಿಗಳ ಮುತುವರ್ಜಿ ಅಭಿನಂದನೀಯ ಎಂದರು. ಮೀಫ್ ಉಪಾಧ್ಯಕ್ಷ, ಸುಳ್ಯ ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫ, ಗಾಂಧಿನಗರ ಜುಮಾ ಮಸ್ಜಿದ್ ಅಧ್ಯಕ್ಷ ಹಾಜಿ ಕೆ ಎಂ ಎಸ್. ಮಹಮ್ಮದ್, ಗ್ರೀನ್ ವ್ಯೂ ಪೂರ್ವಾಧ್ಯಕ್ಷ ಪಿ. ಎ ಮಹಮ್ಮದ್, ಸುಳ್ಯ ಅಲ್ಪ ಸಂಖ್ಯಾತರ ಸಹಕಾರಿ ಸಂಘ ದ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಎಲಿ ಮಲೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಮೀಫ್ ಪದಾಧಿಕಾರಿಗಳಾದ ಅನ್ವರ್ ಹುಸೈನ್ ಗೂಡಿನಬಳಿ, ಕಾರ್ಯಕ್ರಮ ಸಂಯೋಜಕ ಅಝೀಜ್ ಅಂಬರ್ ವ್ಯಾಲಿ ಗ್ರೀನ್ ಪದಾಧಿಕಾರಿಗಳಾದ ಕೆ ಎಸ್ ಉಮ್ಮರ್, ಶಾಫಿ ಕುತ್ತಾಮೊಟ್ಟೆ, ಜಮೀಯ್ಯತುಲ್ ಫಲಾಹ್ ಅಧ್ಯಕ್ಷ ಅಡ್ವೋಕೇಟ್ ಮೂಸ ಪೈoಬಚಾಲ್, ಪದಾದಿಕಾರಿ ಗಳಾದ ಹಸೈನಾರ್ ವಳಲoಬೆ, ಅಬ್ದುಲ್ ಖಾದರ್ ಸಂಗಮ್ ಅಮೀರ್ ಕುಕ್ಕುಂಬಳ,ಎಸ್. ಪಿ. ಅಬೂಬಕ್ಕರ್ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಇಲ್ಯಾಸ್ ಕಾಶಿಪಟ್ಟಣ ಸ್ವಾಗತಿಸಿ ಶಿಕ್ಷಕ ರಂಜಿತ್ ವಂದಿಸಿದರು ಶಿಕ್ಷಕಿ ಫಾತಿಮ ಕಾರ್ಯಕ್ರಮ ನಿರೂಪಿಸಿದರು.




