ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಸಾಹಿತ್ಯೋತ್ಸವವು ಆಗಸ್ಟ್ 24 ರಂದು ಸುಳ್ಯ ಅನ್ಸಾರಿಯ ಗಲ್ಫ್ ಆಡಿಟೋರಿಯಂ ನಲ್ಲಿ ನಡೆಯಿತು, ಸೆಕ್ಟರ್ ಅಧ್ಯಕ್ಷರಾದ ಆಬಿದ್ ಕಲ್ಲುಮುಟ್ಲು ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಯ್ಯದ್ ಕುಂಞಿ ಕೋಯ ತಂಙಳ್ ದುಆ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಅನ್ಸಾರಿಯ ಉಸ್ತಾದ್ ಅಬೂಬಕ್ಕರ್ ಹಿಮಮಿ ಸಖಾಫಿ, ನಾಯಕರಾದ ಫೈಝಲ್ ಝುಹ್ರಿ, ಹಮೀದ್ ಬೀಜಕೊಚ್ಚಿ, ಹಮೀದ್ ಸುಣ್ಣಮೂಲೆ, ಇನ್ನಿತರ ನಾಯಕರು ಶುಭ ಹಾರೈಸಿದರು, ಕಾರ್ಯಕ್ರಮದಲ್ಲಿ ಸುಳ್ಯ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ ಎಂ ಮುಸ್ತಫಾ, ಅಬೂಬಕ್ಕರ್ ಜಟ್ಟಿಪಳ್ಳ, ಖಾದರ್ ಸಂಗಂ, ಸಿದ್ದೀಕ್ ಕಟ್ಟೆಕಾರ್, ಅಬ್ದುಲ್ಲಾ ಕಟ್ಟೇಕಾರ್, ಮಜೀದ್ ಜನತಾ, ಸಾಹಿತ್ಯೋತ್ಸವ ಫಿನಾನ್ಸ್ ಕಾರ್ಯದರ್ಶಿ ರುನೈಝ್ ಕೊಯನಾಡು ಸ್ವಾಗತಿಸಿ ವಂದಿಸಿದರು.

ಬಳಿಕ ನಡೆದ ಸ್ಪರ್ಧಾ ಕಾರ್ಯಕ್ರಮದಲ್ಲಿ ಸೆಕ್ಟರ್ ನ ಸಪ್ತ ಶಾಖೆಗಳ ಸುಮಾರು 350 ಮಿಕ್ಕ ಸ್ಪರ್ಧಾರ್ಥಿಗಳು 120 ಸ್ಪರ್ಧೆಗಳಲ್ಲಿ ಭಾಗವಹಿಸಿ ಗೂನಡ್ಕ ಯೂನಿಟ್ ಚಾಂಪಿಯನ್, ಗಾಂಧಿನಗರ ಯೂನಿಟ್ ರನ್ನರ್ಸ್, ಮೊಗರ್ಪಣೆ ಯೂನಿಟ್ ತೃತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡಿತು.

ಸ್ಟೇಜ್ ಕಾರ್ಯಕ್ರಮದಲ್ಲಿ ವೈಯುಕ್ತಿಕವಾಗಿ ಅತಿ ಹೆಚ್ಚು ಅಂಕ ಪಡೆದ ಕಲ್ಲುಗುಂಡಿ ಯೂನಿಟ್ ನ ಅರ್ಫಾಝ್ ಸ್ಟಾರ್ ಆಫ್ ದಿ ಫೆಸ್ಟ್ ಪ್ರಶಸ್ತಿಯನ್ನು ಪಡೆದರೆ, ಸ್ಟೇಜೆತರ ಕಾರ್ಯಕ್ರಮದಲ್ಲಿ ವೈಯುಕ್ತಿಕವಾಗಿ ಗುತ್ತಿಗಾರು ಯೂನಿಟ್ ನ ಮಹಮ್ಮದ್ ನಿಹಾಲ್ ಪೆನ್ ಆಫ್ ದಿ ಫೆಸ್ಟ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸೆಕ್ಟರ್ ಸಾಹಿತ್ಯೋತ್ಸವ ಚೇರ್ಮ್ಯಾನ್ ಆಸೀಫ್ ಎಲಿಮಲೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಅನ್ಸಾರಿಯ ಖತೀಬ್ ಹಾಫಿಲ್ ಹಾಮೀದ್ ಹಿಮಮಿ ಸಖಾಫಿ ಉದ್ಘಾಟಿಸಿದರು, ನಗರ ಪಂಚಾಯತ್ ಸದಸ್ಯ ಉಮ್ಮರ್ ಕೆ ಎಸ್, ಮಜೀದ್ ಕೆ ಬಿ ಇನ್ನಿತರರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು, ಅತಿಥಿಗಳಾಗಿ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ, ಯುವ ಉದ್ಯಮಿ ಫೈಝಲ್ ಕಟ್ಟೆಕಾರ್, ಅನ್ಸಾರಿಯ ಗಲ್ಫ್ ಸಮಿತಿ ಸದಸ್ಯ ಇಕ್ಬಾಲ್ ಕನಕಮಜಲು, ಸಿದ್ದೀಕ್ ಕೋಡಿಯಮ್ಮ, ಮಹಮ್ಮದ್ ಕೆ ಎಂ ಎಸ್, ಮಹಮ್ಮದ್ ಕುಂಞಿ ಗೂನಡ್ಕ, ಶರೀಫ್ ಜಟ್ಟಿಪಳ್ಳ, ಮುಜೀಬ್, ಸಾಲಿ, ಹನೀಫ್ ಅಲ್ಫಾ ಸಾಬೀತ್ ಹಿಕಮಿ, ಇನ್ನಿತರ ಗಣ್ಯರು,ಉಲಮಾ ಉಮರಾ ನಾಯಕರು ಸೆಕ್ಟರ್ ಪದಾಧಿಕಾರಿಗಳು, ಉಪಸ್ಥಿತರಿದ್ದರು, ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಕಮಾಲ್ ಕಡಬ ಸ್ವಾಗತಿಸಿ ಸಲ್ಮಾನ್ ಹಿಮಮಿ ಸಖಾಫಿ ನಿರೂಪಿಸಿ ವಂದಿಸಿದರು
ವರದಿ ರುನೈಝ್ ಕೊಯನಾಡು
ಫಿನಾನ್ಸ್ ಕಾರ್ಯದರ್ಶಿ ಸಾಹಿತೋತ್ಸವ ಸಮಿತಿ