ಕೆಎಸ್‍ಆರ್‌ಟಿಸಿ ಬಸ್‍ಗೆ (KSRTC Bus) ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವುದು ಕುಕನೂರ ತಾಲೂಕಿನ ಮಸಬಹಂಚಿನಾಳದಲ್ಲಿ ನಡೆದಿದೆ.

ಬಸ್ ತಡರಾತ್ರಿ ಯಲಬುರ್ಗಾದಿಂದ ಬೆಂಗಳೂರಿಗೆ (Bengaluru) ಹೊರಟಿತ್ತು. ಬಸ್ ಮಸಬಹಂಚಿನಾಳ ಬಳಿ ತಲುಪಿದ್ದಾಗ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಪರಿಣಾಮ ಬಸ್‍ನ ಗಾಜು ಪುಡಿಪುಡಿಯಾಗಿದೆ. ಕಲ್ಲು ತೂರಾಟದ ಬಳಿಕ ಬಸ್‍ನ್ನು ಚಾಲಕ ವಾಪಸ್ ಡಿಪೋಗೆ ಕೊಂಡೊಯ್ದಿದ್ದಾರೆ. ಇದರಿಂದ ಪ್ರಯಾಣಿಕರು ರಾತ್ರಿ ವೇಳೆ ಪರದಾಡುವಂತಾಯಿತು

Leave a Reply

Your email address will not be published. Required fields are marked *