Nammasullia: ಆಂಬ್ಯುಲೆನ್ಸ್ ಚಾಲಕ ಮಾಲಕರ ಸಂಘ ಸುಳ್ಯ ತಾಲೂಕು ಇದರ 2025-2026ನೇ ಸಾಲಿನ ವಾರ್ಷಿಕ ಮಹಾಸಭೆಯು ದಿನಾಂಕ 14-08-2025 ರಂದು ರಾತ್ರಿ 8:00 ಗಂಟೆಗೆ ವೆಲೆನ್ಸಿಯ ಬಿಲ್ಡಿಂಗ್ ನಾವೂರು ರಸ್ತೆಯಲ್ಲಿ ಇರುವ ಸಂಘದ ಕಚೇರಿಯಲ್ಲಿ
ಸಂಘದ ಅಧ್ಯಕ್ಷರಾದ ಶರತ್ ಅಡ್ಯಡ್ಕ ಅರಂತೋಡು ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಗೌರವ ಅಧ್ಯಕ್ಷರಾದ ಶಿವಪ್ರಸಾದ್ ಕೆ ಜೆ ಕೊಡಿಯಾಲಬೈಲು ರವರು ನೆರವೇರಿಸಿದರು. ಸಭೆಗೆ ಆಗಮಿಸಿದ ತಾಲೂಕು ಆಂಬ್ಯುಲೆನ್ಸ್ ಚಾಲಕ ಮಾಲಕರನ್ನು ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಗೂನಡ್ಕ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ನಂತರ ಸಭೆಯಲ್ಲಿ ವರದಿಯನ್ನು ಪ್ರದೀಪ್ ಪಂಜ ವಾಚಿಸಿದರು. ಲೆಕ್ಕ ಪತ್ರಮಂಡನೆ ಕೋಶಾಧಿಕಾರಿಯಾದ ರಫೀಕ್ ಬಿ ಎಂ ಎ ಮಂಡಿಸಿದರು.
ಆ ಬಳಿಕ ಮಾತನಾಡಿದ ಸಂಘದ ಉಪಾಧ್ಯಕ್ಷರಾದ ಉನೈಸ್ ಪೆರಾಜೆರವರು ಸಂಘದ ಅಭಿವೃದ್ಧಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು. ಮುಂದಿನ ಕಾರ್ಯ ಯೋಜನೆಯ ಪಟ್ಟಿಗಳನ್ನು ತಯಾರಿಸಿ ಮೀಡಿಯಾ ಕಾರ್ಯದರ್ಶಿಯಾದ ರಫೀಕ್ ಬಾಳೆಮಕ್ಕಿ ಸಭೆಯಲ್ಲಿ ತಿಳಿಸಿದರು. ನಂತರ ಸಮಿತಿಯನ್ನು ಪುನರ್ ರಚಿಸಲಾಯಿತು ನೂತನ ಸಮಿತಿಗೆ ಕ್ಯಾಬಿನೆಟ್ ನಾಯಕರಾಗಿ 15 ಮಂದಿಯನ್ನು ನೇಮಿಸಲಾಯಿತು
ಗೌರವ ಅಧ್ಯಕ್ಷರಾಗಿ ಶಿವಪ್ರಸಾದ್ ಕೊಡಿಯಲ್ ಬೈಲು ,ಅಧ್ಯಕ್ಷರಾಗಿ ಶರತ್ ಅಡ್ಯಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೀಕ್ ಗೂನಡ್ಕ, ಕೋಶಾಧಿಕಾರಿಯಾಗಿ ರಫೀಕ್ ಬಿ ಎಂ ಎ, ಉಪಾಧ್ಯಕ್ಷರಾಗಿ ಹುನೈಸ್ ಪೆರಾಜೆ , ಜೊತೆ ಕಾರ್ಯದರ್ಶಿ ಮಿಥುನ್ ಸುಳ್ಯ, ಕಾರ್ಯದರ್ಶಿ ಪುನೀತ್ ಸಂಕೇಶ ಕುಕ್ಕುಜಡ್ಕ, ಸಂಘಟನಾ ಕಾರ್ಯದರ್ಶಿ ತಾಜುದ್ದೀನ್ ಟರ್ಲಿ ,ಮೀಡಿಯಾ ಕಾರ್ಯದರ್ಶಿ ಅಬ್ದುಲ್ ರಝಕ್, ( ಅಚ್ಚು ), ರೆಸ್ಕ್ಯೂ ಕಾರ್ಯದರ್ಶಿ ಬಷೀರ್ ಆರ್ ಬಿ ,ಕಾನೂನು ಸಲಹೆಗಾರರಾಗಿ ಕೇಶವ ಚಂದ್ರ ಭಟ್ ಬೆಳ್ಳಾರೆ ,ಮತ್ತು ವಿಭಾಗವಾರು ಸಹಾಯಕ ಕಾರ್ಯದರ್ಶಿಗಳಾಗಿ ಫೈನಾನ್ಸಿಯಲ್ ರಫೀಕ್ ಬಾಳೆ ಮಕ್ಕಿ ,ಸಂಘಟನಾ ಶಮೀರ್ ಸಿ ಎ ,ರೆಸ್ಕ್ಯೂ ಶರತ್ ಕಲ್ಲುಗುಂಡಿ ,ಮೀಡಿಯಾ ಉದಯ ಪಂಜ ರವರು ಆಯ್ಕೆಯಾದರು
ಕಾರ್ಯಕಾರಿ ಸಮಿತಿಯಲ್ಲಿ ವಿನಯ್ ಅರಂತೋಡು, ಹಮೀದ್ ಬೆಳ್ಳಾರೆ, ಸಿದ್ದೀಕ್ ಜಟ್ಟಿಪಳ್ಳ, ಹನೀಫ್ ಜಯನಗರ, ಜಯಪ್ರಕಾಶ್ ನೆಕ್ರಾಜೆ, ಪ್ರಶಾಂತ,
ಸೀತಾರಾಮ ಮಡಿಕೇರಿ, ಹಿಮಕರ ಊರುಬೈಲು, ಪ್ರದೀಪ್ ಪಂಜ, ಪ್ರಥ್ವಿರಾಜ್ ಬೆಳ್ಳಾರೆ, ಕಿರಣ್ ಕುಮಾರ್ ಸುಳ್ಯ, ಸದಾಶಿವ ಬೆಳ್ಳಾರೆ, ಅನುಪ್
ಬೆಳ್ಳಾರೆ, ಬಾಲಸುಬ್ರಹ್ಮಣ್ಯ ದುಗ್ಗಲಡ್ಕ ಕೊನೆಯಲ್ಲಿ ಕಾರ್ಯದರ್ಶಿ ಪುನೀತ್ ಸಂಕೇಶರವರು ಧನ್ಯವಾದ ಸಮರ್ಪಿಸಿದರು.