ಸುಳ್ಯ: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವದ ಪ್ರಯುಕ್ತ ನಡೆಯಲಿರುವ ಸಾರ್ವಜನಿಕ ಅನ್ನಸಂತರ್ಪಣೆಗಾಗಿ, ಸುಳ್ಯ ತಾಲೂಕು ಆಟೋರಿಕ್ಷಾ ಚಾಲಕರ ಸಂಘ (ರಿ.) ಮತ್ತು ಭಾರತೀಯ ಮಜ್ದೂರ್ ಸಂಘ (ಬಿ.ಎಂ.ಎಸ್) ಸುಳ್ಯ ಇದರ ನೇತೃತ್ವದಲ್ಲಿ ಹಸಿರುವಾಣಿ (ತರಕಾರಿ) ಸಮರ್ಪಣೆ ಮಾಡಲಾಯಿತು.

ಇಂದು ಬೆಳಿಗ್ಗೆ 10:30ಕ್ಕೆ ಸರಿಯಾಗಿ ದೇವಸ್ಥಾನಕ್ಕೆ ಆಗಮಿಸಿದ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು, ಶ್ರೀ ದೇವರ ಜಾತ್ರಾ ಮಹೋತ್ಸವದ ಯಶಸ್ವಿಗಾಗಿ ಪ್ರಾರ್ಥಿಸಿ, ಸಂಘದ ಎಲ್ಲಾ ಸದಸ್ಯರಿಂದ ಸಂಗ್ರಹಿಸಲಾದ ಹಸಿರುವಾಣಿಯನ್ನು ಶ್ರೀ ದೇವರಿಗೆ ಸಮರ್ಪಿಸಿದರು. ಸದಾ ಶ್ರೀ ದೇವರ ಸೇವೆಯಲ್ಲಿ ಮತ್ತು ಸಾರ್ವಜನಿಕರ ಸೇವೆಯಲ್ಲಿ ತೊಡಗಿರುವ ಕಾರ್ಮಿಕ ಸಂಘಟನೆಯ ಈ ಕಾರ್ಯ ಶ್ಲಾಘನೀಯವಾಗಿದೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಪ್ರಕಾಶ್ ಎಂ.ಎಸ್, ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್.ಎಂ., ಕೋಶಾಧಿಕಾರಿ ರವಿ ಎಸ್., ಸಂಘಟನಾ ಕಾರ್ಯದರ್ಶಿ ಸುಂದರ ಪೆರಾಜೆ, ಉಪಾಧ್ಯಕ್ಷರಾದ ಪ್ರಶಾಂತ್ ಭಟ್, ಜೊತೆ ಕಾರ್ಯದರ್ಶಿ ಸುರೇಂದ್ರ ಕಾಮತ್ ಉಪಸ್ಥಿತರಿದ್ದರು.
ಹಾಗೆಯೇ ನಿಕಟ ಪೂರ್ವ ಅಧ್ಯಕ್ಷರಾದ ರಾಧಾಕೃಷ್ಣ ಬೈತಡ್ಕ, ವಿಜಯ ಕುಮಾರ್ ಉಬರಡ್ಕ, ನಿರ್ದೇಶಕರಾದ ಜನಾರ್ದನ ಕೆ., ಜಯರಾಮ ಕುಲಾಲ್, ಲೋಕೇಶ್, ಭಾನುಪ್ರಕಾಶ್, ವೇಣು ಗೋಪಾಲ ನಾಯರ್, ಶಂಕರ, ರೋಹಿತ್, ಚಾಮಯ್ಯ, ನಿತ್ಯಾನಂದ, ಶಿವಾನಂದ, ಮಹೇಶ್, ಪ್ರಸನ್ನ, ಪ್ರದೀಪ, ಜಗದೀಶ್ ಎನ್.ಆರ್, ಭಾಸ್ಕರ ಹಾಗೂ ಸಂಘದ ಹಲವಾರು ಚಾಲಕ ಸದಸ್ಯರು ಉಪಸ್ಥಿತರಿದ್ದು ಹಸಿರುವಾಣಿ ಸಮರ್ಪಣೆಯಲ್ಲಿ ಪಾಲ್ಗೊಂಡರು.
