Nammasullia: ಸುಳ್ಯದ ರಥಬೀದಿ ತಿರುವಿನಲ್ಲಿ ಪೈಪ್ ಒಡೆದು ನೀರು ಪೋಲಾದ ಘಟನೆ ಇಂದು ನಡೆದಿದೆ. ಈ ಭಾಗದಲ್ಲಿ ಇದಕ್ಕಿಂತ ಮೊದಲು ಹಲವಾರು ಬಾರಿ ನೀರಿನ ಪೈಪು ಒಡೆದು ನೀರು ಪೋಲು ಆಗಿದ್ದರು, ಅದಕ್ಕೆ ಬೇಕಾದ ಸಮಗ್ರ ದುರಸ್ತಿ ಕಾರ್ಯ ನಡೆಯದೇ ಇದ್ದರಿಂದ ಪದೇ ಪದೇ ಪೈಪು ಒಡೆದು ನೀರು ಪೋಲು ಆಗುತ್ತಿದೆ ಎಂದು ಹೇಳಲಾಗುತ್ತಿದೆ.
ಇದು ಸಾರ್ವಜನಿಕರ ಆಕ್ರೋಶಕ್ಕೆ ಕೂಡಾ ಕಾರಣವಾಗಿದೆ. ಸುಳ್ಯ ರಥಬೀದಿ ತಿರುವು ರಸ್ತೆಯಲ್ಲಿ ನೀರಿನ ಪೈಪು ಒಡೆದು ನೀರು ಚಿಮ್ಮಿ ಹರಿಯುತ್ತಿರುವ ದೃಶ್ಯ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ನೀರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಿದು ವಾಹನ ಸವಾರರಿಗೆ ಸಂಕಷ್ಟ ಎದುರಾಗಿದೆ ಎಂದು ತಿಳಿದು ಬಂದಿದೆ.