1950ರಲ್ಲಿ ಸುಳ್ಯದ ಪ್ರಥಮ ಪ್ರೌಢಶಾಲೆಯಾಗಿ

ಪ್ರಾರಂಭಗೊಂಡು 1975ರಲ್ಲಿ ಪದವಿ ಪೂರ್ವ ಕಾಲೇಜು ಆಗಿ ಉನ್ನತಿಗೊಂಡು ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ, ತೂಗುಸೇತುವೆಗಳ ಸರದಾರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಿರೀಶ್ ಭಾರದ್ವಾಜ್, ಆ‌ರ್.ಕೆ.ನಾಯರ್ ರಂತಹ ಮಹಾ ಮೇಧಾವಿಗಳನ್ನು ನಾಡಿಗೆ ಸಮರ್ಪಿಸಿದ ಸುಳ್ಯ ಸರಕಾರಿ ಜೂನಿಯರ್ ಕಾಲೇಜು ಅಮೃತ ಮಹೋತ್ಸವದ ಕಾರ್ಯಕ್ರಮದ ಅಂಗವಾಗಿ ಹಿರಿಯ ವಿದ್ಯಾರ್ಥಿ ಗಳ ಸಮ್ಮಿಲನ, ಸಂವಾದ, ಪರಸ್ಪರ ಪರಿಚಯ, ಗುರುವಂದನೆ, ಹಳೆ ಗುರುಗಳೊಂದಿಗೆ ಮಾತನಾಡುವ ಸುವರ್ಣ ಅವಕಾಶ, ಆಟೋಟ ಸ್ಪರ್ಧೆ, ಕ್ವಿಜ್ ಮೊದಲಾದ ಕಾರ್ಯಕ್ರಮಗಳೊಂದಿಗೆ ಸಂಪನ್ನ ಗೊಂಡಿತು. ಈ ಕಾರ್ಯಕ್ರಮದಲ್ಲಿ ಗಿರೀಶ್ ಭಾರದ್ವಾಜ್, ನಿಟ್ಟೆ ಇಂಜಿನಿಯರಿಂಗ್‌ ಕಾಲೇಜು ಪ್ರಾಂಶುಪಾಲ ನಿರಂಜನ್ ಚಿಂಪುಳೂಕರ್, ಕೊಡಗು ಯೂನಿವರ್ಸಿಟಿ ರಿಜಿಸ್ಟ್ರಾ‌ರ್ ಡಾ.ಸುರೇಶ್‌, ಎಂ.ಆರ್.ಪಿ.ಎಲ್.ಎಂ.ಡಿ ಸತೀಶ್, ಡಾ ವೀಣಾ, ಹಿರಿಯ ಕಲಾವಿದ ಗೋಪಾಡ್ಕರ್, ಮೈಸೂರು ರಂಗಾಯಣದ ಎಂ.ಎಸ್. ಗೀತಾ, ಸುಳ್ಯ ರಂಗಮನೆ ನಿರ್ದೇಶಕ ಜೀವನ್ ರಾಮ್,ದ.ಕ ಮತ್ತು ಉಡುಪಿ

ಜಿಲ್ಲೆಗಳ ಜೇನು ವ್ಯವಸಾಯ ಸಹಕಾರ ಸಂಘದ ಅಧ್ಯಕ್ಷ ಚಂದ್ರ ಕೋಲ್ಟಾರ್, ನಿವೃತ್ತ ಪ್ರಾಂಶುಪಾಲರುಗಳಾದ ಲಿಂಗಪ್ಪ ಗೌಡ, ದಾಮೋದರ ಮಾಸ್ತರ್, ಚಂದ್ರಶೇಖರ ಕಾಂತಮಂಗಲ, ಕರ್ನಾಟಕ ಬೃಹತ್ ಉದ್ದಿಮೆಗಳ ಸ್ಟ್ರೀನಿಂಗ್ ಕಮಿಟಿ ನಿರ್ದೇಶಕರಾಗಿದ್ದ ಶಿವ ನಾಯ್, ಡಾ.ರಂಗಯ್ಯ, ಸುಬ್ಬಯ್ಯ ಮಾಸ್ತರ್, ಸದರ್ನ್ ರೈಲ್ವೆಸ್ ನಿವೃತ್ತ ಅಧಿಕಾರಿ ಶೇಷಪ್ಪ ನಾಯ್ಕ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಚಂದ್ರಶೇಖರ ಪೇರಾಲು, ನಿವೃತ್ತ ಇಂಜಿನಿಯರ್ ಸಂಕಪ್ಪ ಗೌಡ, ಅಜ್ಜಾವರ ಚೈತನ್ಯ ಸ್ವಾಮಿ, ಮಾವಜಿ ಮುದ್ದಪ್ಪ ಗೌಡ, ಅಮೃತ ಮಹೋತ್ಸವ ಸಮಿತಿ ಕಾರ್ಯದರ್ಶಿ ಎಂ.ಬಿ. ಸದಾಶಿವ, ಸಂಘಟನಾ ಕಾರ್ಯದರ್ಶಿ ಕೆ.ಎಂ. ಮುಸ್ತಫಾ, ಪ್ರಾಂಶುಪಾಲ ಮೋಹನ್ ಗೌಡ ಬೊಮ್ಮಟ್ಟಿ, ಉಪ ಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ, ಕಾರ್ಯದರ್ಶಿ ಶಿವಪ್ರಕಾಶ್ ಕೇರ್ಪಳ, ಕೋಶಾಧಿಕಾರಿ ರಾಮಚಂದ್ರ ಗೌಡ ಎಸ್.ಡಿ.ಎಂ.ಸಿ ಅಧ್ಯಕ್ಷೆ ಮಂಜುಳಾ ಬಡಿಗೇ‌ರ್, ಮೊದಲಾದವರು ಉಪಸ್ಥಿತರಿದ್ದರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ.ಬಿ ಸುಧಾಕ‌ರ್ ರೈ ಸ್ವಾಗತಿಸಿ, ಕೆ.ಟಿ ವಿಶ್ವನಾಥ್‌ ವಂದಿಸಿದರು.

ದಿನೇಶ್‌ ಮಡಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಗುರುಗಳನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *