ಸುಳ್ಯ: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ರಿ.) ಸುಳ್ಯ ತಾಲೂಕು ಘಟಕದ ವತಿಯಿಂದ 3ನೇ ವರ್ಷದ ‘ಪತ್ರಕರ್ತರಿಗೆ ಮತ್ತು ಮನೆಯವರಿಗೆ ಕ್ರೀಡಾಕೂಟ’ವು 2026ರ ಫೆಬ್ರವರಿ 26ರಂದು (ಗುರುವಾರ) ಸುಳ್ಯದ ಪ್ರೆಸ್ ಕ್ಲಬ್ ಆವರಣದಲ್ಲಿ ನಡೆಯಲಿದೆ.

ಅಪರಾಹ್ನ 3.00 ಗಂಟೆಗೆ ನಡೆಯಲಿರುವ ಉದ್ಘಾಟನಾ ಸಮಾರಂಭವನ್ನು ಅಜ್ಜಾವರದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಬಾಲಕೃಷ್ಣ ನಾಯ್ಕ್ ಅವರು ಉದ್ಘಾಟಿಸಲಿದ್ದಾರೆ. ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಯಶ್ವಿತ್ ಕಾಳಮ್ಮನೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪುತ್ತೂರಿನ ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ಚಂದ್ರಪ್ರಭಾ ಗೌಡ, ಸುಳ್ಯ ಪ್ರೆಸ್ ಕ್ಲಬ್‌ನ ಸ್ಥಾಪಕಾಧ್ಯಕ್ಷರಾದ ಶ್ರೀ ಹರೀಶ್ ಬಂಟ್ವಾಳ್, ಪುತ್ತೂರು ಸಮೃದ್ಧಿ ಕೋ.ಅ. ಸೊಸೈಟಿಯ ಕಾರ್ಯಕಾರಿ ಸಮಿತಿ ಸದಸ್ಯೆ ಶ್ರೀಮತಿ ಸ್ಮಿತಾ ರಾವ್ ಹಾಗೂ ಪ್ರಗತಿಪರ ಕೃಷಿಕರಾದ ಶ್ರೀ ಜಿ.ಕೆ. ರಮೇಶ್ ಕಾಳಮ್ಮನೆ ಭಾಗವಹಿಸಲಿದ್ದಾರೆ.
ಸಮಾರೋಪ ಮತ್ತು ಬಹುಮಾನ ವಿತರಣೆ:
ಸಂಜೆ 6.30ಕ್ಕೆ ಸಮಾರೋಪ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದ್ದು, ಸುಳ್ಯ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಶ್ರೀ ಸಂತೋಷ್ ಅವರು ವಿಜೇತರಿಗೆ ಬಹುಮಾನ ವಿತರಣೆ ಮಾಡಲಿದ್ದಾರೆ.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಕೆ.ಜೆ.ಯು ದ.ಕ. ಜಿಲ್ಲಾಧ್ಯಕ್ಷರಾದ ಶ್ರೀ ಈಶ್ವರ ವಾರಣಾಶಿ, ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷರಾದ ಶ್ರೀ ಶರೀಫ್ ಜಟ್ಟಿಪಳ್ಳ, ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀ ಲೋಕೇಶ್ ಪೆರ್ಲಂಪಾಡಿ ಹಾಗೂ ಸುಳ್ಯ ಮಹಾದೇವ್ ಫ್ಲವರ್ಸ್ & ಡೆಕೋರೇಟರ್ಸ್ ಮಾಲಕರಾದ ಶ್ರೀ ಮಾಧವ ಮಂಗಲ್ಪಾಡಿ ಅವರು ಉಪಸ್ಥಿತರಿರುವರು.
ಈ ಕ್ರೀಡಾಕೂಟಕ್ಕೆ ಪತ್ರಕರ್ತರು, ಅವರ ಕುಟುಂಬಸ್ಥರು ಹಾಗೂ ಕ್ರೀಡಾಭಿಮಾನಿಗಳನ್ನು ಆದರದಿಂದ ಆಮಂತ್ರಿಸಲಾಗಿದೆ ಎಂದು ಸಂಘದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




