ಸುಳ್ಯ: ನಗರದ ಜ್ಯೋತಿ ಸರ್ಕಲ್ ಬಳಿ ಬಲೆನೋ ಕಾರೊಂದು ಬೈಕ್’ಗೆ ಡಿಕ್ಕಿ ಹೊಡೆದು, ಬಳಿಕ ನಿಲ್ಲಿಸದೇ ಪರಾರಿಯಾಗಲು ಯತ್ನಿಸಿದ ಘಟನೆ ನಡೆದಿದೆ.

ವೇಗವಾಗಿ ಬಂದ ಬಲೆನೋ ಕಾರು ಬೈಕ್’ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಬಲೆನೋ ಚಾಲಕ ಏಕಾಏಕಿ ಸಡನ್ ಬ್ರೇಕ್ (Sudden Brake) ಹಾಕಿದ ಪರಿಣಾಮ, ಹಿಂಬದಿಯಿಂದ ಬರುತ್ತಿದ್ದ ಸ್ವಿಫ್ಟ್ ಕಾರು ಬಲೆನೋಗೆ ಗುದ್ದಿದೆ.
ಅಪಘಾತದ ನಂತರವೂ ಬಲೆನೋ ಚಾಲಕ ಕಾರನ್ನು ನಿಲ್ಲಿಸದೆ ಜ್ಯೋತಿ ಸರ್ಕಲ್ನಿಂದ ಹಿಟ್ ಅಂಡ್ ರನ್ (Hit and Run) ಮಾಡಲು ಯತ್ನಿಸಿದ್ದಾನೆ. ತಕ್ಷಣವೇ ಎಚ್ಚೆತ್ತ ಸ್ವಿಫ್ಟ್ ಕಾರಿನ ಚಾಲಕ, ಬಲೆನೋ ಕಾರನ್ನು ಹಳೆಗೇಟು (Oldgate) ವರೆಗೆ ಬೆನ್ನಟ್ಟಿ ಹೋಗಿ ಹಿಡಿದಿದ್ದಾರೆ ಎಂದು ವರದಿಯಾಗಿದೆ.




