ಸುಳ್ಯ: ಪಟ್ಟಣದ ಪ್ರೈವೇಟ್ ಬಸ್ ನಿಲ್ದಾಣದ ಎದುರು ಮಸಾಲೆ ಪುರಿ ವ್ಯಾಪಾರಿಯೊಬ್ಬರ ವಾಹನದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದ್ದು, ಸ್ಥಳೀಯರ ಮತ್ತು ಆಟೋ ಚಾಲಕರ ತ್ವರಿತ ಕಾರ್ಯಾಚರಣೆಯಿಂದ ಬೆಂಕಿಯನ್ನು ನಂದಿಸಲಾಗಿದೆ.

​ಪೈಚಾರ್ ನಿವಾಸಿ, ಮಸಾಲೆ ಪುರಿ ವ್ಯಾಪಾರಿ ಆನಂದ ಶೆಟ್ರು ಅವರು ತಮ್ಮ ದಿನನಿತ್ಯದ ವ್ಯಾಪಾರವನ್ನು ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಅವರು ಸುಳ್ಯದ ಖಾಸಗಿ ಬಸ್ ನಿಲ್ದಾಣದ ಎದುರು ತಮ್ಮ ವಾಹನವನ್ನು ನಿಲ್ಲಿಸಿ ಸಮೀಪದ ಅಂಗಡಿಗೆ ತೆರಳಿದ್ದರು. ಈ ವೇಳೆ ವಾಹನದಲ್ಲಿ ಏಕಾಏಕಿ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ.

​ತಕ್ಷಣವೇ ಎಚ್ಚೆತ್ತ ರಾತ್ರಿ ಪಾಳೆಯದ ಆಟೋ ಚಾಲಕ ಅಶ್ರಫ್ ಮಡೇಕೋಲು, ಪುನೀತ್ ಸಂಕೇಶ, ಮಿಥುನ್ ಸುಳ್ಯ ಹಾಗೂ ಸ್ಥಳೀಯ ರಾಜೇಶ್ ಪೆಟ್ರೋಲ್ ಬಂಕ್‌ ನ ಇಬ್ಬರು ಸಿಬ್ಬಂದಿಗಳು ಒಗ್ಗೂಡಿ ಬೆಂಕಿ ನಂದಿಸುವಲ್ಲಿ ಸಹಕರಿಸಿದ್ದಾರೆ.

​ಬೆಂಕಿ ಅವಘಡದಿಂದ ವಾಹನದ ಒಳಭಾಗ ಸುಟ್ಟು ಹೋಗಿದ್ದು, ಸಣ್ಣ ಪುಟ್ಟ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ. ಸ್ಥಳೀಯ ಯುವಕರ ಸಮಯಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.

Leave a Reply

Your email address will not be published. Required fields are marked *