ಸುಳ್ಯ: ಪ್ರೀತಿ ಶಾಂತಿನಗರ ಪೈಚಾರ್ (ಸುಳ್ಯ) ಇದರ ಆಶ್ರಯದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟ 10 ತಂಡಗಳ ‘ಮೊಗೇರ ಪ್ರೀಮಿಯರ್ ಲೀಗ್ (MPL 2026)’ ಸೀಸನ್ 1 ಕ್ರಿಕೆಟ್ ಪಂದ್ಯಾಟವು ಫೆಬ್ರವರಿ 22 ರಂದು ಪೈಚಾರ್‌ನ ಶಾಂತಿನಗರ ಸ್ಟೇಡಿಯಂನಲ್ಲಿ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.

ಫೈನಲ್ ಹಣಾಹಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಮಿರೇಕಲ್ ಅಟ್ಯಾಕರ್ಸ್ ಬಾಳಿಲ ತಂಡವು ಪ್ರಥಮ ಬಹುಮಾನವಾದ ₹15,000 ನಗದು ಹಾಗೂ ಎಂ.ಪಿ.ಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್‌ನಲ್ಲಿ ವಿರೋಚಿತ ಹೋರಾಟ ನೀಡಿದ ಡ್ರೀಮ್ ಟೀಮ್ ಸುಳ್ಯ ತಂಡವು ದ್ವಿತೀಯ ಸ್ಥಾನಕ್ಕೆ (ರನ್ನರ್ಸ್ ಅಪ್) ತೃಪ್ತಿಪಟ್ಟುಕೊಂಡು, ₹10,000 ನಗದು ಮತ್ತು ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.

ವೈಯಕ್ತಿಕ ವಿಭಾಗದ ಪ್ರಶಸ್ತಿ ವಿಜೇತರು:

  • ಸರಣಿ ಶ್ರೇಷ್ಠ (Man of the Series): ತಿಲಕ್ ಬೀರಮಂಗಲ
  • ಫೈನಲ್ ಪಂದ್ಯ ಶ್ರೇಷ್ಠ (Final Man of the Match): ಜಾನು ದೊಡ್ಡತೋಟ
  • ಉತ್ತಮ ಬ್ಯಾಟ್ಸ್‌ಮನ್ (Best Batsman): ಕಿರಣ್ ದೊಡ್ಡತೋಟ
  • ಉತ್ತಮ ಬೌಲರ್ (Best Bowler): ಕಾರ್ತಿಕ್ ಹರಿಹರ
  • ಉತ್ತಮ ಫೀಲ್ಡರ್ (Best Fielder): ಪುರುಷೋತ್ತಮ್ ಕುಂಡಡ್ಕ
  • ಉತ್ತಮ ಕೀಪರ್ (Best Keeper): ರೋಹಿತ್ ನಿಡ್ಮಾರ್

​ಈ 11 ಜನರ ಕ್ರಿಕೆಟ್ ಪಂದ್ಯಾಟವು ಅಪಾರ ಕ್ರೀಡಾಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಹಾಗೂ ಆಟಗಾರರಿಗೆ ಆಕರ್ಷಕ ಟ್ರೋಫಿ ಮತ್ತು ಬಹುಮಾನಗಳನ್ನು ವಿತರಿಸಿ ಗೌರವಿಸಲಾಯಿತು.

Leave a Reply

Your email address will not be published. Required fields are marked *