5 ದಿನಗಳ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಊರೂಸ್ ಸಮಾರಂಭ

ಸಾವಿರಾರು ಭಕ್ತಾದಿಗಳ ಆಶಾ ಕೇಂದ್ರವಾಗಿರುವ ಸುಳ್ಯ ದುಗುಲಡ್ಕ ದರ್ಗಾದಲ್ಲಿ ಸಯ್ಯದ್ ಫಖ್ರುದ್ದೀನ್ ತಂಙಳ್ (ನ.ಮ 22 ನೇ ಆಂಡ್ ನೇರ್ಚ ಹಾಗೂ ಜಂಇಯ್ಯತ್ತು ತರ್ಬಿಯ್ಯತ್ತಿಲ್ ಬುಖಾರಿಯ್ಯದ 32 ನೇ ವಾರ್ಷಿಕ ಖುತುಬಿಯ್ಯತ್ ಕಾರ್ಯಕ್ರಮಕ್ಕೆ ಡಿ 25 ರಂದು ಚಾಲನೆ ನೀಡಲಾಯಿತು.

ಧ್ವಜಾರೋಹಣವನ್ನು ಸಯ್ಯದ್ ಹಾಮಿದ್ ಕೋಯಮ್ಮ ತಂಙಳ್ ನಡುವನ್ನೂರ್ ಇವರು ನೆರವೇರಿಸಿದರು.

ದರ್ಗಾ ಝಿಯಾರತ್ ಹಾಗೂ ಸಾಮೂಹಿಕ ಪ್ರಾರ್ಥನೆಯೊಂದಿಗೆ ಉರೂಸ್ ಸಮಾರಂಭವನ್ನು ಮಂಗಳೂರು ಸಂಯುಕ್ತ ಖಾಝಿ ತ್ವಾಖಾ ಅಹ್ಮದ ಮೌಲವಿ ರವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸೈಯದ್ ಫಾಲಿಲಿ ತಂಙಳ್, ಸೈಯದ್ ಜಲಾಲುದ್ದೀನ್ ತಂಙಳ್, ಸಯ್ಯದ್ ರಾಝಿ ತಂಙಳ್, ಹಿರಿಯರಾದ ಅಬ್ದುಲ್ ಕರೀಂ ಫೈಝಿ,ಸಂಸ್ಥೆಯ ಪ್ರಾಂಶುಪಾಲರಾದ ಹಾಫಿಲ್ ಶಿಹಾಬ್ ದಾರಿಮಿ,ಮಸೀದಿ ಆಡಳಿತ ಸಮಿತಿಯ ಅಧ್ಯಕ್ಷ ಅಬ್ದುಲ್ ರಹಮಾನ್ ಹಾಜಿ, ಅಬ್ದುಲ್ಲ ಹಾಜಿ ಪಳ್ಳತ್ತೂರು, ಮಹಮ್ಮದ್ ಕುಂಞಿ, ಕೆ ಮಹಮ್ಮದ್, ಮಾಜಿ ಅಧ್ಯಕ್ಷರಾದ ಕೆ ಎಂ ಹಸೈನಾರ್ ಕೊಳಂಜಿಕೋಡಿ, ಜಮಾಅತ್ ಕಾರ್ಯದರ್ಶಿ ಹಂಝ ದೊಡ್ಡತೋಟ (ಅಜ್ಮೀರ್), ಖಿದ್ಮತುಲ್ ಇಸ್ಲಾಂ ಅಸೋಸಿಯೇಷನ್ ಅಧ್ಯಕ್ಷರಾದ ಹುಸೈನ್, ಕಾರ್ಯದರ್ಶಿ ಆರಿಫ್ ದುಗಲಡ್ಕ, ಹಾಗೂ ಷರೀಫ್ ದೊಡ್ಡತೋಟ, ಮಹಮ್ಮದ್ ಬಾದಷಾ ಮೊದಲಾದವರು ಉಪಸ್ಥಿತರಿದ್ದರು.
ಇಂದಿನಿಂದ ಐದು ದಿನಗಳ ವಿವಿಧ ಖ್ಯಾತ ವಾಗ್ಮಿಗಳಿಂದ ಧಾರ್ಮಿಕ ಪ್ರಭಾಷಣ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಡಿಸೆಂಬರ್ 29ರಂದು ಸಾರ್ವಜನಿಕ ಅನ್ನದಾನದ ಮೂಲಕ ಸಮಾರೋಪಗೊಳ್ಳಲಿದೆ.

Leave a Reply

Your email address will not be published. Required fields are marked *