ಸುಳ್ಯ: ಸಮಸ್ತ ಕೇಂದ್ರೀಯ ಜಂಇಯ್ಯತುಲ್ ಉಲಮಾ ನೂರು ವರ್ಷ ಪೂರೈಸಿದ ಹಿನ್ನಲೆಯಲ್ಲಿ, 2026ರ ಫೆಬ್ರವರಿ 4 ರಿಂದ 8 ರವರೆಗೆ ಕಾಸರಗೋಡಿನ ಕುಣಿಯದಲ್ಲಿ ನಡೆಯಲಿರುವ ‘ಸಮಸ್ತ ಅಂತಾರಾಷ್ಟ್ರೀಯ ಮಹಾ ಸಮ್ಮೇಳನ’ದ ಅಂಗವಾಗಿ ಸುಳ್ಯ ವಲಯದಲ್ಲಿ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ.
ಸಮಸ್ತ ಶತಮಾನೋತ್ಸವದ ಪ್ರಚಾರಾರ್ಥವಾಗಿ ಜನವರಿ 20ರಂದು ಸುಳ್ಯದಲ್ಲಿ ಬೃಹತ್ ಪ್ರಚಾರ ಸಮ್ಮೇಳನವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಯಶಸ್ವಿಗಾಗಿ ಸುಳ್ಯ ವಲಯ ಎಸ್.ಕೆ.ಎಸ್.ಎಸ್.ಎಫ್ (SKSSF) ವತಿಯಿಂದ, ವಲಯ ಅಧ್ಯಕ್ಷರಾದ ಅಬೂಬಕ್ಕರ್ ಪೂಪಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಸ್ತದ ವಿವಿಧ ಸಂಸ್ಥೆಗಳನ್ನೊಳಗೊಂಡ ಸುಮಾರು 40 ಸದಸ್ಯರ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ನೂತನ ಸ್ವಾಗತ ಸಮಿತಿಯ ಪದಾಧಿಕಾರಿಗಳ ವಿವರ ಈ ಕೆಳಗಿನಂತಿದೆ:
- ಮುಖ್ಯ ರಕ್ಷಾಧಿಕಾರಿ: ಬಹು| ಝೈನುಲ್ ಆಬಿದೀನ್ ತಂಗಳ್ ದುಗ್ಗಲಡ್ಕ
- ಚೇರ್ಮನ್: ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ
- ವರ್ಕಿಂಗ್ ಚೇರ್ಮನ್: ಅಬೂಬಕ್ಕರ್ ಪೂಪಿ
- ಕನ್ವೀನರ್: ಖಾದರ್ ಮೊಟ್ಟೆಂಗಾರ್
- ವರ್ಕಿಂಗ್ ಕನ್ವೀನರ್: ಆಶಿಕ್ ಸುಳ್ಯ, ಅಕ್ಬರ್ ಕರಾವಳಿ, ಖಾದರ್ ಫೈಝಿ ಐವರ್ನಾಡು
- ಕೋಶಾಧಿಕಾರಿ: ಇರ್ಷಾದ್ ಬದ್ರಿಯಾ
- ಫಿನಾನ್ಸ್ ಚೇರ್ಮನ್: ಆಲಿ ಹಾಜಿ
- ಫಿನಾನ್ಸ್ ಕನ್ವೀನರ್: ಹಮೀದ್ ಜಿ.ಕೆ
ಪ್ರಚಾರ ಸಮಿತಿ:
ಜಮಾಲುದ್ದೀನ್ ಕೆ.ಎಸ್ ಬೆಳ್ಳಾರೆ, ಖಲಂದರ್ ಎಲಿಮಲೆ, ಮೊಯಿನುದ್ದೀನ್ ಫೈಝಿ, ಸಿದ್ದೀಕ್ ಅಡ್ಕ, ಇಕ್ಬಾಲ್ ಸುಣ್ಣಮೂಲೆ, ಶಹೀದ್ ಪಾರೆ, ರಹೀಮ್ ನೆಟ್ಟಾರ್, ತಾಜುದ್ದೀನ್ ಅರಂತೋಡು, ಮಸೂದ್ ಮಚ್ಚು.
ವೇದಿಕೆ ಸಮಿತಿ:
ಅಕ್ಬರ್ ಕರಾವಳಿ ಅವರನ್ನು ನೇಮಕ ಮಾಡಲಾಯಿತು.
ಸಭೆಯಲ್ಲಿ ಅಬ್ದುಲ್ ಖಾದರ್ ಸ್ವಾಗತಿಸಿ, ವಂದಿಸಿದರು.



