ಸುಳ್ಯ: ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ (ರಿ.) ಶಾಂತಿನಗರ, ಸುಳ್ಯ ದಕ್ಷಿಣ ಕನ್ನಡ ಇದರ ಆಶ್ರಯದಲ್ಲಿ ಮಾಸಿಕ ‘ಸ್ವಲಾತ್ ಮಜ್ಲಿಸ್’ ಕಾರ್ಯಕ್ರಮವು ಏಪ್ರಿಲ್ 12ರ ಭಾನುವಾರ (ಆದಿತ್ಯವಾರ) ಅತ್ಯಂತ ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು.

​ಶಾಂತಿನಗರದ ನೂರುಲ್ ಇಸ್ಲಾಂ ಮದ್ರಸ ವಠಾರದಲ್ಲಿ ಮಗ್ರಿಬ್ ನಮಾಝ್ ಬಳಿಕ ಈ ಆಧ್ಯಾತ್ಮಿಕ ಮಜ್ಲಿಸ್ ಜರುಗಿತು. ಕಾರ್ಯಕ್ರಮದ ದುವಾ ನೇತೃತ್ವ ಹಾಗೂ ಮುಖ್ಯ ಪ್ರಭಾಷಣವನ್ನು ಮಲಪ್ಪುರಂನ ಸೆಯ್ಯಿದ್ ಉವೈಸ್‌ ನಈಮಿ ಅಲ್-ಜೀಲಾನಿ ಅವರು ನೆರವೇರಿಸಿದರು. ಮಜ್ಲಿಸ್‌ನ ಸ್ವಲಾತ್ ನೇತೃತ್ವವನ್ನು ಮುದುಗುಡದ ಬಹು| ಉಸ್ತಾದ್ ಅಬ್ದುಲ್ ಖಾದರ್ ಸಖಾಫಿ ಅಲ್ ಕಾಮಿಲಿ ಅವರು ವಹಿಸಿದ್ದರು.

​ಇದೇ ವೇಳೆ, ಪೆರಾಜೆಯ ಬಹು| ಉಸ್ತಾದ್ ಅಬ್ದುರ್ರಶೀದ್ ಝೈನಿ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು.

​ಈ ಪುಣ್ಯ ಕಾರ್ಯಕ್ರಮದಲ್ಲಿ ಊರಿನ ಹಾಗೂ ಸುತ್ತಮುತ್ತಲಿನ ಅಪಾರ ಸಂಖ್ಯೆಯ ಜಮಾಅತ್ ಬಾಂಧವರು ಪಾಲ್ಗೊಂಡು ಪ್ರಾರ್ಥನೆಯಲ್ಲಿ ಭಾಗಿಯಾದರು. ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್‌ನ ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Leave a Reply

Your email address will not be published. Required fields are marked *