ಸುಳ್ಯದ ಅಮೃತಭವನದಲ್ಲಿ ಅ.6 ರಂದು ಊದು ಪೂಜೆ
ಡಿ. ಜೆ ಫ್ರೆಂಡ್ಸ್ ಸುಳ್ಯ ಇದರ ವತಿಯಿಂದ ಸುಳ್ಯ ದಸರಾ ಉತ್ಸವ 2025 ಪ್ರಯುಕ್ತ 7ನೇ ವರ್ಷದ ಸ್ಥಬ್ದ ಚಿತ್ರದ ಕಲಾ ಕಾಣಿಕೆಯಾಗಿ ಪಿಲಿರಂಗ್ ಹುಲಿ ವೇಷ ಕುಣಿತವು ಶೋಭಾಯಾತ್ರೆಗೆ ಮೆರುಗು ನೀಡಲಿದ್ದು ಆ ಪ್ರಯುಕ್ತ ಊದು ಪೂಜೆಯ ಆಮಂತ್ರಣ ಪತ್ರಿಕೆಯನ್ನು ಸೆ.5 ರಂದು ಕಲ್ಕುಡ ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಡಿ. ಜೆ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ದೀಪಕ್ ರಾಜ್, ಅಧ್ಯಕ್ಷ ನಿತಿನ್ ಸಾಲಿಯಾನ್, ಉಪಾಧ್ಯಕ್ಷ ಮಂಜುನಾಥ್ ಎಂ, ಪಿ, ಕಾರ್ಯದರ್ಶಿ ಸಚಿನ್ ಜಾಲ್ಲೂರು, ಜೊತೆ ಕಾರ್ಯದರ್ಶಿ ಲಕ್ಷ್ಮೀಶ, ಸದಸ್ಯ ಪ್ರಜ್ವಲ್, ನೂತನ್, ದೀಕ್ಷಿತ್ ರಾವ್, ರಾಕೇಶ್ ಜಟ್ಟಿಪಳ್ಳ, ಸತ್ಯಪ್ರಸಾದ್, ಲತೀಶ್, ರಕ್ಷಿತ್, ರಂಜನ್ ದಾಸ್, ನಿಶಾಂತ್, ಸಂದೇಶ್, ಲಿತಿನ್, ಕಾರ್ತಿಕ್, ಪ್ರಸನ್ನ, ಚೇತನ್, ಜಿತು ಬೆಟ್ಟಂಪಾಡಿ, ದಿನೇಶ್, ಭರತ್, ನಿಖಿಲ್, ವಿಜಯ ರಾಜ್, ಸುಳ್ಯದ ನ್ಯಾಯವಾದಿ ಹರೀಶ್ ಬೂಡುಪನ್ನೆ ಉಪಸ್ಥಿತರಿದ್ದರು.


