ವಿವಿಧ ಕ್ಷೇತ್ರದಲ್ಲಿ ವಿಶ್ವ ಸಾಧನೆಗೆ ತರಬೇತಿ ನೀಡುವ ದಿಲ್ ಹಿಝ್ ವರ್ಲ್ಡ್ ಸ್ಕೂಲ್ ಇದರ ವಿದ್ಯಾರ್ಥಿ ಯಾದ ಸುಳ್ಯದ ಜಟ್ಟಪ್ಪಳ್ಳ ಅನ್ಸಾರಿಯ ಬಳಿ ಹರ್ಲಡ್ಕ ವಿಲ್ಲಾ ದ ನಿವಾಸಿ ಮಹಮ್ಮದ್ ರುವೈದ್ ಅತೀ ವೇಗದಲ್ಲಿ 1 ರಿಂದ 10 ರವರೆಗೆ ಅನುಕ್ರಮವಾಗಿ ಕ್ಯಾಲ್ಕುಲೇಟರ್ ಉಪಯೋಗಿಸಿ 42 ಸೆಕೆಂಡ್ಸ್ ಗಳಲ್ಲಿ ಗುರಿ ತಲುಪಿ 16 ವರ್ಷ 8 ತಿಂಗಳ 26 ದಿವಸ ದ ಅತೀ ಕಡಿಮೆ ವಯೋಮಾನ ವಿಭಾಗ ದಲ್ಲಿ ಇಂಟೆರ್ ನ್ಯಾಶ ನಲ್ ವರ್ಲ್ಡ್ ರೆಕಾರ್ಡ್ ಆಫ್ ಎಕ್ಸಲೆನ್ಸ್ ನಲ್ಲಿ ನಲ್ಲಿ ವಿಶ್ವ ದಾಖಲೆ ಮಾಡಿರುತ್ತಾರೆ. ಈ ಸಾಧನೆಗೆ ಗೌರವ ಪುರಸ್ಕಾರ ಮತ್ತು ಪ್ರಶಸ್ತಿ ಪ್ರದಾನ ಶೀಘ್ರದಲ್ಲಿಯೇ ಕ್ಯಾಲಿಕಟ್ ನಲ್ಲಿ ನಡೆಯಲಿದೆ ಎಂದು ಸಂಘಟಕರು ತಿಳಿಸಿರುತ್ತಾರೆ.
ಮಹಮ್ಮದ್ ರುವೈದ್ ಪ್ರಸ್ತುತ ಕೇರಳದ ಪ್ರಸಿದ್ಧ ವಿದ್ಯಾ ಸಂಸ್ಥೆ ಪುನೂರ್ ಗಾರ್ಡನ್ ನಲ್ಲಿ 10 ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಸುಳ್ಯ ಅನ್ಸರಿಯಾ ಎಜುಕೇಶನ್ ಸೆಂಟರ್ ಪ್ರಧಾನ ಕಾರ್ಯದರ್ಶಿ ಉದ್ಯಮಿ ಅಬ್ದುಲ್ ಲತೀಫ್ ಹರ್ಲಡ್ಕ ಮತ್ತು ಉಮಯಿರ ದಂಪತಿಗಳ ಪುತ್ರ.

Leave a Reply

Your email address will not be published. Required fields are marked *