ಸುಳ್ಯ: ಅಕ್ಟೋಬರ್ 3, 4ರಂದು ರಾಷ್ಟ್ರ ಮಟ್ಟದ ‘ಎ’ ಗ್ರೇಡ್ ಕಬಡ್ಡಿ ಮಹಾಸಂಗ್ರಾಮ – ಕಣಕ್ಕಿಳಿಯಲಿದ್ದಾರೆ ಖ್ಯಾತ ಪ್ರೊ ಕಬಡ್ಡಿ ತಾರೆಯರು!

News


ಸುಳ್ಯ: ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ (ರಿ.) ಸುಳ್ಯ ತಾಲೂಕು ಇದರ 12ನೇ ವಾರ್ಷಿಕೋತ್ಸವದ ಅಂಗವಾಗಿ, ದೇಶದ ಮುಂಚೂಣಿ ಆಟಗಾರರನ್ನೊಳಗೊಂಡ ರಾಷ್ಟ್ರ ಮಟ್ಟದ ‘ಎ’ ಗ್ರೇಡ್ (National Level ‘A’ Grade) 12 ಆಹ್ವಾನಿತ ಪುರುಷ ತಂಡಗಳ ಹೊನಲು ಬೆಳಕಿನ ಮ್ಯಾಟ್‌ ಕಬಡ್ಡಿ ಮಹಾಸಂಗ್ರಾಮ “ಸುಳ್ಯ ಕಬಡ್ಡಿ ಉತ್ಸವ 2026” ಅಕ್ಟೋಬರ್ 03 ಮತ್ತು 04ರಂದು ಸುಳ್ಯದ ಜೂನಿಯರ್ ಕಾಲೇಜು ಮೈದಾನದಲ್ಲಿ ಜರುಗಲಿದೆ.
ಅಮೆಚೂರು ಕಬಡ್ಡಿ ಫೆಡರೇಶನ್‌ ಆಫ್ ಇಂಡಿಯಾದ ಅಧಿಕೃತ ನಿಯಮಾವಳಿಗಳ ಪ್ರಕಾರ ನಡೆಯುವ ಈ ಪ್ರತಿಷ್ಠಿತ ಪಂದ್ಯಾವಳಿಯು ಅಕ್ಟೋಬರ್ 03 (ಶನಿವಾರ) ಮತ್ತು 04 (ಭಾನುವಾರ) ರಂದು ಪ್ರತಿದಿನ ಸಂಜೆ 03:00 ಗಂಟೆಗೆ ಚಾಲನೆಗೊಳ್ಳಲಿದೆ.

ಆಕರ್ಷಕ ನಗದು ಬಹುಮಾನಗಳು

  • ಪ್ರಥಮ ಬಹುಮಾನ: ₹1,00,000/-
  • ದ್ವಿತೀಯ ಬಹುಮಾನ: ₹70,000/-
  • ತೃತೀಯ ಬಹುಮಾನ: ₹35,000/-
  • ಚತುರ್ಥ ಬಹುಮಾನ: ₹35,000/-

ಕಾರ್ಯಕ್ರಮದ ವಿವರಗಳು

  • ಸ್ಥಳ: ಜೂನಿಯರ್ ಕಾಲೇಜ್ ಮೈದಾನ, ಸುಳ್ಯ
  • ದಿನಾಂಕ: ಅಕ್ಟೋಬರ್ 03 ಮತ್ತು 04
  • ಸಮಯ: ಸಂಜೆ 03:00 ಗಂಟೆಯಿಂದ ಪ್ರಾರಂಭ
  • ಆಯೋಜಕರು: ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ (ರಿ.), ಸುಳ್ಯ

ಹೆಚ್ಚಿನ ವಿವರ ಹಾಗೂ ಮಾಹಿತಿಗಾಗಿ ಸಂಘದ ಅಧ್ಯಕ್ಷರಾದ ಜಿ.ಪಿ. ಸಂಶುದ್ದೀನ್ (9448012134), ಕಾರ್ಯದರ್ಶಿ ಶಿವಪ್ರಸಾದ್ ಕೆ. (9108235817) ಅಥವಾ ಎಸ್.ಎ. ಶಾಫಿ ಪ್ರಗತಿ (9611824600) ಅವರನ್ನು ಸಂಪರ್ಕಿಸಬಹುದು ಎಂದು ಸಂಘಟಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *