ಅಧ್ಯಕ್ಷರಾಗಿ ಸಿದ್ದೀಕ್ ಅಲೆಕ್ಕಾಡಿ, ಪ್ರ.ಕಾರ್ಯದರ್ಶಿಯಾಗಿ ನಾಸಿರ್ ಸಹದಿ ಆಯ್ಕೆ

ಬೈತಡ್ಕ: ಸುನ್ನಿ ಮೇನೆಜ್ಮೆಂಟ್ ಎಸೋಶಿಯೇಷನ್(SMA) ಬೈತಡ್ಕ ರೀಜನಲ್ ಇದರ ವಾರ್ಷಿಕ ಮಹಾಸಭೆಯು ದಿನಾಂಕ 26-10-2025 ಭಾನುವಾರ ಬದ್ರಿಯಾ ಜುಮ್ಮಾ ಮಸ್ಜಿದ್ ಪುಂಚತ್ತಾರು ವಿನಲ್ಲಿ SMA ಬೈತಡ್ಕ ರೀಜನಲ್ ಅಧ್ಯಕ್ಷರಾದ ಸಿದ್ದೀಕ್ ಅಲೆಕ್ಕಾಡಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಎಸ್.ಎಂ.ಎ ಬೆಳ್ಳಾರೆ ಝೋನಲ್ ಅಧ್ಯಕ್ಷರಾದ ಇಬ್ರಾಹಿಂ ಬೀಡುರವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಬಹು| ಅಬ್ಬಾಸ್ ಹಾರೂನಿ ರವರು ಸಮಾರಂಭವನ್ನು ಉದ್ಘಾಟಿಸಿದರು. ಇಬ್ರಾಹಿಂ ಸಖಾಫಿ ಪುಂಡೂರು ರವರು ದುವಾಃ ನೆರವೇರಿಸಿದರು. ಎಸ್.ಎಂ.ಎ ಹಾಗೂ ಮೊಹಲ್ಲಾ ಪ್ರತಿನಿಧಿಗಳ ಜವಾಬ್ದಾರಿಯ ವಿಚಾರದ ಬಗ್ಗೆ ಎಸ್.ಎಂ.ಎ ದ.ಕ ಜಿಲ್ಲಾ ಪ್ರ‌.ಕಾರ್ಯದರ್ಶಿ ಬಹು| ಇಬ್ರಾಹಿಂ ಸಕಾಫಿ ಕಬಕ ರವರು ಮುಖ್ಯ ಭಾಷಣ ಮಾಡಿದರು.

ವಾರ್ಷಿಕ ವರದಿಯನ್ನು ಮಂಡನೆ ಮಾಡಿದ ಬಳಿಕ ನೂತನ ಸಮಿತಿಯ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಸಿದ್ದೀಕ್ ಅಲೆಕ್ಕಾಡಿ ಪುನರಾಯ್ಕೆಯಾದರು.ಉಪಾಧ್ಯಕ್ಷರಾಗಿ ರಝಾಕ್ ಕೂರ,ಉಪ್ಪುಕುಂಞಿ ಹಾಜಿ ಪಳ್ಳತ್ತಾರು ಹಾಗೂ ಸಾದಿಕ್ ನರ್ಲಡ್ಕ ಆಯ್ಕೆಯಾದರು.
ಪ್ರ.ಕಾರ್ಯದರ್ಶಿಯಾಗಿ ಬಹು| ನಾಸಿರ್ ಸ-ಅದಿ ಪಳ್ಳತ್ತಾರು,ಕೋಶಾದಿಕಾರಿಯಾಗಿ ಅಬೂಬಕ್ಕರ್ ಕೂರತ್, ಜೊತೆ ಕಾರ್ಯದರ್ಶಿಯಾಗಿ ಮಹಮ್ಮದ್ ಪುಂಚತ್ತಾರು, ಹಾಗೂ ಬಹು| ಫಾರೂಕ್ ಹಿಮಮಿ ಸಖಾಫಿ,ಸಂಘಟನಾ ಕಾರ್ಯದರ್ಶಿಯಾಗಿ ಸಾದಿಕ್ ಸಮಹಾದಿ, ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ರೀಜನಲ್ ವ್ಯಾಪ್ತಿಯ 13 ಮೊಹಲ್ಲಾಗಳಿಂದ ತಲಾ ಇಬ್ಬರಂತೆ 26 ಸದಸ್ಯರನ್ನು ನೇಮಕ ಮಾಡಲಾಯಿತು.
ವೇದಿಕೆಯಲ್ಲಿ SJM ಬೈತಡ್ಕ ರೇಂಜ್ ಅಧ್ಯಕ್ಷರಾದ ಬಹು|ಲತೀಫ್ ಮುಸ್ಲಿಯಾರ್ ಕೂರತ್, ಮೊಯಿದೀನ್ ಹಾಜಿ ಪುಂಚತ್ತಾರು,ಪ್ರ.ಕಾರ್ಯದರ್ಶಿ ಲತೀಫ್ ಪುಂಚತ್ತಾರು,ಹಾಗೂ ಹಸನ್ ಕುಂಞಿ ಹಾಜಿ ಸಮಹಾದಿ ಉಪಸ್ಥಿತರಿದ್ದರು.

ಬದ್ರಿಯಾ ಜುಮ್ಮಾ ಮಸ್ಜಿದ್ ಪುಂಚತ್ತಾರು ಖತೀಬರಾದ ಬಹು| ಫಾರೂಕ್ ಹಿಮಮಿ ಸಖಾಫಿ ರವರು ಸ್ವಾಗತಿಸಿದರು, ಎಸ್.ಎಂ.ಎ ಬೈತಡ್ಕ ರೀಜನಲ್ ಪ್ರ.ಕಾರ್ಯದರ್ಶಿ ನಾಸಿರ್ ಸಹದಿ ಪಳ್ಳತ್ತಾರು ಧನ್ಯವಾದಗೈದರು.

Leave a Reply

Your email address will not be published. Required fields are marked *