ಕೊಯನಾಡು: ಸುನ್ನಿ ಮುಸ್ಲಿಂ ಜುಮಾ ಮಸೀದಿಯಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು, ಬೆಳಗ್ಗೆ 7 ಗಂಟೆಗೆ ಜಮಾಅತ್ ಅಧ್ಯಕ್ಷರಾದ ಹಾಜಿ ಎಸ್ ಮೊಯಿದಿನ್ ಕುಂಞಿ ಧ್ವಜಾರೋಹಣ ನೆರವೇರಿಸಿದರು, ಸುಬುಲು ಸ್ಸಲಾಂ ಮದ್ರಸ ವಿದ್ಯಾರ್ಥಿಗಳು ಪ್ರತಿಜ್ಞಾ ಬೋಧಿಸಿದರು, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಮಾಅತ್ ಖತೀಬರಾದ ಸಿದ್ದೀಕ್ ಝುಹ್ರಿ ರವರು ದೇಶ ಪ್ರೇಮವು ಇಮಾನಿನ ಒಂದು ಭಾಗವಾಗಿರುತ್ತದೆ, ಸರ್ವರೂ ದೇಶದ ಐಕ್ಯತೆ ಅಖಂಡತೆ ಸಾರ್ವಭೌಮತ್ವಕ್ಕೆ ಪಣ ತೊಡಬೇಕೆಂದು ಹೇಳಿ ಸರ್ವರಿಗೂ ಸ್ವಾತಂತ್ರ ದಿನಾಚರಣೆಯ ಶುಭ ಹಾರೈಸಿದರು, ಜಮಾಅತ್ ಅಧ್ಯಕ್ಷರಾದ ಹಾಜಿ ಎಸ್ ಮೊಯಿದಿನ್ ರವರು ಮಾತನಾಡಿ ಸ್ವಾತಂತ್ರ್ಯ ದಿನಾಚರಣೆವು ನಮ್ಮ ದೇಶದ ಇತಿಹಾಸದಲ್ಲಿ ಒಂದು ಮಹತ್ವದ ದಿನವಾಗಿದೆ ಈ ದಿನದಂದು ನಾವು ನಮ್ಮ ದೇಶದ ಸ್ವತಂತ್ರಕ್ಕಾಗಿ ಹೋರಾಡಿದ ಎಲ್ಲಾ ವೀರರನ್ನು ನೆನಪಿಸಿಕೊಳ್ಳೋಣ ಹಾಗೂ ಅವರಿಗೆ ಗೌರವ ಸಲ್ಲಿಸೋಣ ಎಂದು ಹೇಳಿ ಸರ್ವರಿಗೂ ಸ್ವಾತಂತ್ರ ದಿನಾಚರಣೆಯ ಶುಭ ಹಾರೈಸಿದರು, ನುಸ್ರತುಲ್ ಇಸ್ಲಾಂ ಅಸೋಸಿಯೇಶನ್ ಅಧ್ಯಕ್ಷರಾದ ಹನೀಫ್ ಎಸ್ ಪಿ ರವರು ಮಾತನಾಡಿ ದೇಶಪ್ರೇಮ ಬಾಂಧವ್ಯ ಮಮತೆ ಇವುಗಳ ಸಂಕೇತ ಆದರೆ ದ್ವೇಷ ಇವುಗಳನ್ನೆಲ್ಲ ಚೂರು ಮಾಡುವ ಆಯುಧ, ದ್ವೇಷವನ್ನು ಬಿಟ್ಟು ದೇಶ ಪ್ರೇಮವನ್ನು ಬೆಳೆಸಿಕೊಳ್ಳಿ ಎಂದು ಸರ್ವರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭ ಹಾರೈಸಿದರು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸದರ್ ಮುಅಲ್ಲಿಂ ನೌಶಾದ್ ಫಾಳಿಲಿ, ಜಮಾಅತ್ ಸಮಿತಿ ಮಾಜಿ ಅಧ್ಯಕ್ಷರಾದ ಹಾಜಿ ಅಲವಿ ಕುಟ್ಟಿ, ಅಬ್ದುಲ್ ರಝಾಕ್ ಎಸ್ ಎ, ಪ್ರಧಾನ ಕಾರ್ಯದರ್ಶಿ ಮುನೀರ್ ಪಿ ಎಂ, ಸದಸ್ಯರಾದ ಅಶ್ರಫ್ ಬಿ ಎಂ, ಖಾದರ್ ಟಿ ಎಂ, ಅಬ್ದುಲ್ ರಹಿಮಾನ್ ಎಸ್ ಕೆ, ಹಂಸ ತೇಕಿಲ್, ನಝೀರ್, ಉಮ್ಮರ್, ರಫೀಕ್, ಗಫೂರ್, ರಹೀಂ, ಲತೀಫ್, ಸೈದಲವಿ, ಅಹಮದ್, ವಾಹಿದ್, ಅಬ್ಬಾಸ್, ಝಾಕಿರ್ ಹಾಗೂ ಇನ್ನಿತರ ಸದಸ್ಯರು, ಮದ್ರಸ ಅಧ್ಯಾಪಕರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.