ಕೊಯನಾಡು: ಸುನ್ನಿ ಮುಸ್ಲಿಂ ಜುಮಾ ಮಸೀದಿ ಕೊಯನಾಡು ವತಿಯಿಂದ ಆಯೋಜಿಸಿರುವ ಈದ್ ಮಿಲಾದ್ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಆಗಸ್ಟ್ 29ರಂದು ಜುಮಾ ನಮಾಝ್ ಬಳಿಕ ಜಮಾಅತ್ ಅಧ್ಯಕ್ಷರಾದ ಹಾಜಿ ಎಸ್. ಮೊಯ್ದೀನ್ ಕುಂಞಿ ಬಿಡುಗಡೆಗೊಳಿಸಿದರು.

ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಬೆಳಗ್ಗೆ 8 ಗಂಟೆಗೆ ಧ್ವಜಾರೋಹಣ, 8.30ಕ್ಕೆ ಸ್ವಲಾತ್ ಜಾಥಾ, ನಂತರ ಬೃಹತ್ ಮೌಲಿದ್ ಪಾರಾಯಣ ನಡೆಯಲಿದೆ. ಅಸರ್ ನಮಾಝ್ ಬಳಿಕ ಸುಬುಲುಸ್ಸಲಾಂ ಮದ್ರಸ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ, ಬಹುಮಾನ ವಿತರಣೆ ಹಾಗೂ ಸಭಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಖತೀಬರಾದ ಅಲ್ ಹಾಜ್ ಸಿದ್ದೀಕ್ ಝುಹ್ರಿ, ಸದರ್ ಮುಅಲ್ಲಿಂ ನೌಶಾದ್ ಫಾಳಿಲಿ, ಮಾಜಿ ಅಧ್ಯಕ್ಷರಾದ ಹಾಜಿ ಅಲವಿ ಕುಟ್ಟಿ, ಅಬ್ದುಲ್ ರಝಾಕ್ ಎಸ್.ಎ., ಸದಸ್ಯರಾದ ಎಸ್.ಕೆ. ಅಬ್ದುಲ್ ರಹಿಮಾನ್, ಹಸೈನಾರ್ ಅಮೈ, ಅಶ್ರಫ್ ಬಿ.ಎಂ., ಸಲಾಂ ಇ.ಇ., ಖಾದರ್ ಟಿ.ಎಂ., ಝಾಕಿರ್, ರಫೀಕ್ ಟಿ.ಕೆ., ಉಮ್ಮರ್, ಅಜರುದ್ದೀನ್ ಪಿ ಬಿ, ನಸೀರ್ ಟಿ ಕೆ, ಹಾಗೂ ಇತರ ಸದಸ್ಯರು, ಜೊತೆಗೆ ಎಸ್‌ಬಿಎಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.