ನಾಡ ಹಬ್ಬ ದಸರಾ ಉದ್ಘಾಟನೆಯನ್ನು ಮತೀಯ ಮತ್ತು ಧರ್ಮದ ಆಧಾರದಲ್ಲಿ ವಿಭಜನೆ ಮಾಡಿ, ವಿಭಜನೆ ರಾಜಕೀಯಕ್ಕೆ ಅಡಿಪಾಯ ಹಾಕಿದ ಬಿ ಜೆ ಪಿ ಮತ್ತು ಸಂಘ ಪರಿವಾರಕ್ಕೆ ರಾಜ್ಯ ಹೈ ಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಬ್ರೇಕ್ ಹಾಕಿದ್ದು ಜಾತ್ಯತೀತ ತತ್ವವನ್ನು ಎತ್ತಿ ಹಿಡಿದಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಸಂತಸ ವ್ಯಕ್ತಪಡಿಸಿದ್ದಾರೆ, ಜಾತಿ ಗಣತಿ ಸಹಿತ ಪ್ರತಿಯೊಂದು ವಿಷಯದಲಲ್ಲು ಸರಕಾರವನ್ನು ಟೀಕಿಸಿ ಧಾರ್ಮಿಕ ಭಾವನೆ ಕೆರೆಳಿಸಿ ಸ್ವಾರ್ಥ ಲಾಭಕ್ಕೆ ಶ್ರಮಿಸುವ ವಿರೋಧ ಪಕ್ಷ ರಾಜ್ಯ ಸರಕಾರಕ್ಕೆ ಅಭಿವೃದ್ಧಿ ಬಗ್ಗೆ ಒಳ್ಳೆಯ ಸಲಹೆ ನೀಡದೆ ಧಾರ್ಮಿಕ ಭಾವನೆ ಕೆರೆಳಿಸಿ ಸರಕಾರದ ಕೆಲಸಕ್ಕೆ ವಿರೋಧ ಮಾಡಿ ರಾಜ್ಯದ ಜನತೆಗೆ ದ್ರೋಹ ಮಾಡುತ್ತಿದೆ ಎಂದು ವಿರೋಧ ಪಕ್ಷದ ಮೇಲೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹರಿಹಾಯಿದಿದ್ದಾರೆ.