ದುಬೈನಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನದ (Dubai Airshow) ವೇಳೆ ಆಗಸದಲ್ಲಿ ಹಾರುತ್ತಿದ್ದಾಗಲೇ ತೇಜಸ್‌ ಯುದ್ಧ ವಿಮಾನ (Tejas Fighter Jet) ಪತನಗೊಂಡಿರುವ ಘಟನೆ ನಡೆದಿದೆ.

ಬೆಂಗಳೂರಿನ ಹೆಚ್‌ಎಎಲ್‌ (HAL) ನಿರ್ಮಿತ ಲಘು ಯುದ್ಧ ವಿಮಾನವು ಸ್ಥಳೀಯ ಕಾಲಮಾನ ಇಂದು ಮಧ್ಯಾಹ್ನ 2:10ರ ಸುಮಾರಿಗೆ ವೈಮಾನಿಕ ಪ್ರದರ್ಶನ ನೀಡುವಾಗ ಪತನಗೊಂಡಿದೆ. ಸದ್ಯ ತೇಜಸ್‌ ಯುದ್ಧವಿಮಾನ ಪತನಗೊಂಡಿರುವ ವಿಡಿಯೋ ತುಣುಕುಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

ವಿಮಾನ ಪತನಗೊಂಡ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದ್ದು, ವೈಮಾನಿಕ ಪ್ರದರ್ಶನ ವೀಕ್ಷಿಸಲು ಆಗಮಿಸಿದ್ದ ಸಾವಿರಾರು ಸಂಖ್ಯೆಯ ಪ್ರೇಕ್ಷಕರಲ್ಲಿ ಆತಂಕ ಮೂಡಿಸಿದೆ. ಸದ್ಯ ಘಟನೆಯಲ್ಲಿ ಪೈಲಟ್‌ ಕೂಡ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಆದ್ರೆ ಇದು ತಾಂತ್ರಿಕ ದೋಷದಿಂದ ಆಗಿದೆಯೇ? ಅಥವಾ ಪೈಲಟ್‌ನ ದೋಷದಿಂದ ಆಗಿದೆಯೇ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ತಂತ್ರಜ್ಞರ ತಂಡ ಸ್ಥಳಕ್ಕೆ ಧಾವಿಸಿದ್ದು, ವಿಮಾನ ಪತನಕ್ಕೆ ಕಾರಣಗಳನ್ನ ಹುಡುಕಲಾಗುತ್ತಿದೆ. 

Source: public tv

Leave a Reply

Your email address will not be published. Required fields are marked *