ಐವರ್ನಾಡು: ಇಲ್ಲಿನ ಫ್ಯಾಕ್ಟರಿ ಬಳಿ 16 ವರ್ಷದ ಬಾಲಕ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಮೃತರಪಟ್ಟ ಯುವಕ ಕೌಶಿಕ್ ಎಂದು ತಿಳಿದು ಬಂದಿದೆ. ಇದೀಗ ಸ್ಥಳಕ್ಕೆ ಪೈಚಾರಿನ ಮುಳುಗು ತಂಡ ಆಗಮಿಸಿದ್ದು, ಇದರ ಸದಸ್ಯ ಅಬ್ಬಾಸ್ ಶಾಂತಿನಗರ ಇವರು ಮೃತದೇಹವನ್ನು ಮೇಲೆಕೆತ್ತಿದ್ದಾರೆ. ಈ ಸಂಧರ್ಭದಲ್ಲಿ
ಸುಳ್ಯ ಅಂಬುಲನ್ಸ್ ಚಾಲಕ ಮಾಲಕರ ಸಂಘದ ರೇಸ್ಕ್ಯೂ ಕಾರ್ಯದರ್ಶಿ ಆರ್.ಬಿ ಬಶೀರ್ ಪೈಚಾರ್, ಅಶ್ರಫ್
ಸುಳ್ಯ ಅಂಬುಲನ್ಸ್ ಚಾಲಕ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಗೂನಡ್ಕ,ಪುನೀತ್ ಸಂಕೇಶ,ಶಿವಣ್ಣ ಬೆಳ್ಳಾರೆ ಸಹಕರಿಸಿದರು,
ಇನ್ನೂ ಮೃತದೇಹವನ್ನು ಸುಳ್ಯ ಆಸ್ಪತ್ರೆಗೆ ತರಲಾಗಿದೆ ಎಂದು ತಿಳಿದು ಬಂದಿದೆ.
ಕಳೆದ ವಾರ ಕೂಡಾ ಪೈಚಾರು ಭಾಗದಲ್ಲಿ ಓರ್ವ ಮಹಿಳೆ ಬಾವಿಗೆ ಬಿದ್ದ ಸಮಯದಲ್ಲಿ ಇದೇ ಪೈಚಾರಿನ ಮುಳುಗು ತಜ್ಞರ ತಂಡದ ಅಬ್ಬಾಸ್ ಶಾಂತಿನಗರ ಇವರು ಮೇಲಕ್ಕೆತ್ತಿ ಜೀವ ಉಳಿಸುವ ಕಾರ್ಯ ನಡೆಸಿದರು.