ಸಂಪಾಜೆ :ಗೂನಡ್ಕ ಪೆರಡ್ಕ ತೆಕ್ಕಿಲ್ ಮುಹಮ್ಮದ್ ಹಾಜಿ ಮೆಮೊರಿಯಲ್ ತಖ್ವಿಯತುಲ್ ಇಸ್ಲಾಂ ಮದ್ರಸಾ ಮತ್ತು ಹಯಾತುಲ್ ಇಸ್ಲಾಂ ಮದ್ರಸಾ ಗೂನಡ್ಕ ಇದರ ಮೀಲಾದ್ ಫೆಸ್ಟ್ ‘ ಮಹಬ್ಬಃ’25’ ಭಾಗವಾಗಿ ಸಾಂಪ್ರದಾಯಿಕ ಆಹಾರ ಮೇಳ ಸ್ಪರ್ಧೆ ‘ ವಿಂಟೇಜ್ ಫುಡ್ ಫೆಸ್ಟ್ 2025’ ಯಶಸ್ವಿಯಾಗಿ ನಡೆಯಿತು. ಅಹ್ಮದ್ ನಈಂ ಫೈಝಿ ಅಲ್ ಮಅಬರಿ ಪೇರಡ್ಕ ಆಹಾರ ಮೇಳಕ್ಕೆ ಚಾಲನೆ ನೀಡಿದರು. ಪೇರಡ್ಕ ಜಮಾಅತ್ ಅಧ್ಯಕ್ಷರಾದ ಜನಾಬ್ ಟಿ.ಎಂ ಶಹೀದ್ ತೆಕ್ಕಿಲ್, ಎಂ.ಆರ್.ಡಿ.ಎ ಪೇರಡ್ಕ ಅಧ್ಯಕ್ಷ ಜನಾಬ್ ಜಿ.ಕೆ ಹಮೀದ್ ಗೂನಡ್ಕ, ಎಸ್ಕೆ ಎಸ್‌ಎಸ್ಎಫ್ ಗೂನಡ್ಕ ಶಾಖೆ ಅಧ್ಯಕ್ಷ ಮುನೀರ್ ದಾರಿಮಿ ಮುಂತಾದವರು ಭಾಗವಹಿಸಿ, ಮದ್ರಸಾ ವಿದ್ಯಾರ್ಥಿಗಳ ವಿನೂತನ ಪ್ರಯತ್ನವನ್ನು ಶ್ಲಾಘಿಸಿದರು.
ಸಂಪಾಜೆ ಖತೀಬರಾದ ಲುಕ್ಮಾನುಲ್ ಹಕೀಂ ಫೈಝಿ ಅಲ್ ಮಅಬರಿ, ಜುಮಾಅತ್ ಕಾರ್ಯದರ್ಶಿ ಕೆ.ಎಂ ಉಸ್ಮಾನ್ ಅರಂತೋಡು ತೀರ್ಪುಗಾರರಾಗಿ ಸಹಕರಿಸಿದರು. ಆರಿಫ್ ಫೈಝಿ ಅಲ್ ಮಅಬರಿ, ಹಾರಿಸ್ ಕಾಮಿಲ್ ಅಝ್ಹರಿ, ಶಾಕಿರ್ ಮುಸ್ಲಿಯಾರ್ ಮುಂತಾದವರು ಉಪಸ್ಥಿತರಿದ್ದರು. ಆಹಾರ ಮೇಳದಲ್ಲಿ ವಿದ್ಯಾರ್ಥಿಗಳು ಹಳೆಯ ಕಾಲದ ವಿವಿಧ ತಿನಿಸುಗಳು, ಸೊಪ್ಪಿನಿಂದ ತಯಾರಿಸಿದ ಆಹಾರಗಳು, ವಿವಿಧ ಔಷಧೀಯ ತಿಂಡಿಗಳನ್ನು ಪ್ರದರ್ಶಿಸಿದರು. ಜಂಕ್ ಫುಡ್‌ಗಳ ಅತಿಯಾದ ಬಳಕೆಗೆ ಬಲಿಯಾಗುತ್ತಿರುವ ನವ ತಲೆಮಾರಿಗೆ ಈ ರೀತಿಯ ಮೇಳದ ಮೂಲಕ ಆರೋಗ್ಯಕರ ಆಹಾರ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲು ಸಾಧ್ಯವಾಗಿದ್ದು ಅತಿಥಿಗಳು ಮತ್ತು ಪೋಷಕರ ಪ್ರಶಂಸೆಗೆ ಪಾತ್ರವಾಯಿತು.