ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ಕಳೆದ 31 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಇಂದು ಅಕ್ಟೋಬರ್ 31.2025ನೇ ಶುಕ್ರವಾರದಂದು ಸೇವಾ ನಿವೃತ್ತಿ ಹೊಂದುತ್ತಿರುವ ಶ್ರೀಮತಿ ಶೋಭಾ ಇವರನ್ನು ಅಂಗನವಾಡಿ ಮಕ್ಕಳ ಪೋಷಕರು ಮತ್ತು ಗಾಂಧಿನಗರ ನಾಗರೀಕರ ಪರವಾಗಿ ಗೌರವ ಸಮರ್ಪಣೆ ಮಾಡಿ ಅದ್ದೂರಿಯಾಗಿ ಬಿಳ್ಕೊಡಲಾಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಎಮ್ ಮುಸ್ತಫ ರವರು ವಹಿಸಿದ್ದರು.


 ಸುಳ್ಯ ತಹಶೀಲ್ದಾರರಾದ ಮಂಜುಳಾ ಮೇಡಂ
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶೈಲಜಾ ಮೇಡಂ (ಸಿಡಿಪಿಒ)ಸುಳ್ಯ, ಸುಳ್ಯ ನಗರ ಪಂಚಾಯತ್ ಸದಸ್ಯರಾದ ಕೆ.ಎಸ್ ಉಮ್ಮರ್, ರಿಯಾಜ್ ಕಟ್ಟೆಕ್ಕಾರ್, ನಾಮನಿರ್ದೇಶಿತ ಸದಸ್ಯರಾದ ಸಿದ್ದೀಕ್ ಕೊಕ್ಕೋ, ಗಾಂಧಿನಗರ ಕೆಪಿಎಸ್ ಶಾಲೆಯ ಪ್ರಾಂಶುಪಾಲರಾದ ಪರಮೇಶ್ವರಿ, ಅಂಗನವಾಡಿ ಕೇಂದ್ರದ ಬಾಲ ವಿಕಾಸ ಸಮಿತಿ ಮಾಜಿ ಅಧ್ಯಕ್ಷರಾದ ಸವಿತಾ ಮತ್ತು ಶಿಕ್ಷಕರುಗಳು ಮುಂತಾದವರು ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು,ಶ್ರೀಮತಿ ಶೋಭಾ ಅಭಿನಂದನಾ ಸಮಿತಿಯ ಸಂಚಾಲಕರಾದ ಚಿದಾನಂದ ಕುದ್ಪಾಜೆ ಎಲ್ಲರನ್ನು ಸ್ವಾಗತಿಸಿದರು, ನಿವೃತ್ತ ಶಿಕ್ಷಕಿ ಎ.ಜಿ ಭವಾನಿಯವರು ಪ್ರಾಸ್ತಾವಿಕ ಮಾತುಗಳನ್ನಾಡಿದರು ಕಾರ್ಯಕ್ರಮದ ಮುಖ್ಯ ಸಂಘಟಕರಾದ ಸ್ಥಳೀಯ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿಯವರು ಅಭಿನಂದನಾ ಭಾಷಣ ಮಾಡಿದರು, ಶಿಕ್ಷಕಿಯವರ ಕುಟುಂಬ ವರ್ಗದವರು ನೂರಾರು ಅಭಿಮಾನಿಗಳು ಮಕ್ಕಳಪೋಷಕರು ಸಭೆಯಲ್ಲಿ ಭಾಗವಹಿಸಿ ನೆನಪಿನ ಕಾಣಿಕೆಗಳನ್ನು ಶಿಕ್ಷಕಿಯವರಿಗೆ ನೀಡಿ ಗೌರವ ಪೂರಕವಾಗಿ ಬಿಳ್ಕೊಡಲಾಯಿತು ಅಬ್ದುಲ್ ಮಜೀದ್ ಕೆ ಬಿ ಕಾರ್ಯಕ್ರಮ ನಿರ್ವಹಿಸಿ ಧನ್ಯವಾದ ಸಮರ್ಪಿಸಿದರು.



