ಬೈತಡ್ಕ: ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಬೈತಡ್ಕ ಇದರ ವತಿಯಿಂದ ಮಷಿ ಹಾಗೂ ಕಲಂ ಬಳಸಿ ಬರಹ ಮೂಲಕ ಪರಿಶುದ್ಧ ಕುರಾನಿನ 30 ಕಾಂಡ ಗಳನ್ನು ಬರೆದು ಅಧ್ಬುತ ಸಾಧನೆ ಮಾಡಿ ಇತಿಹಾಸ ಸೃಷ್ಟಿಸಿದ ಸಜ್‌ಲಾ ಇಸ್ಮಾಯಿಲ್ ಬೈತಡ್ಕ ರವರ ಪರವಾಗಿ ಆಕೆಯ ತಂದೆ ಬೈತಡ್ಕ ಜಮಾಅತ್ ಸಮಿತಿ ಸದಸ್ಯರು ಆಗಿರುವ ಬಿ.ಪಿ ಇಸ್ಮಾಯಿಲ್ ಹಾಜಿ ರವರಿಗೆ ಸನ್ಮಾನ ಹಾಗೂ ಕುರಾನ್ ಪ್ರದರ್ಶನ ಕಾರ್ಯಕ್ರಮವು ಬೈತಡ್ಕ ಮಸ್ಜಿದ್ ನಲ್ಲಿ ಶುಕ್ರವಾರ ಜುಮ್ಮಾ ನಮಾಝ್ ಬಳಿಕ ನಡೆಯಿತು.

ಈ ಸಂದರ್ಭದಲ್ಲಿ ಬೈತಡ್ಕ ಮಸ್ಜಿದ್ ಆಡಳಿತ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು, ಉರೂಸ್ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಗೂ ಜಮಾಅತ್ ನ ಅಧೀನದಲ್ಲಿರುವ ಎಲ್ಲಾ ಶಾಖಾ ಸಮಿತಿಯ ಪದಾಧಿಕಾರಿಗಳು ಹಾಗೂ ಜಮಾಅತ್‌ನ ಸರ್ವ ಸದಸ್ಯರು ಉಪಸ್ಥಿತರಿದ್ದರು