ಕಲ್ಲುಗುಂಡಿ: ಟಿ.ಟಿ ವಾಹನವೊಂದು ಕಲ್ಲುಗುಂಡಿ ಬಳಿ ಎರಡು ಬೈಕ್ ಗಳಿಗೆ ಡಿಕ್ಕಿ ಹೊಡೆದು (ಹಿಟ್ & ರನ್) ನಿಲ್ಲಿಸದೇ ಪರಾರಿಯಾಗಲೆತ್ನಿಸಿದಾಗ, ಸುಳ್ಯದಲ್ಲಿ ಅಡ್ಡಗಟ್ಟಿ ಹಿಡಿದು ಪೋಲಿಸರಿಗೊಪ್ಪಿಸಿದ ಘಟನೆ ನಿನ್ನೆ ರಾತ್ರಿ ನಡೆದಿದೆ.

ಕಲ್ಲುಗುಂಡಿಯಲ್ಲಿ ಆ.23 ರಂದು ರಾತ್ರಿ 9.30 ರ ವೇಳೆಗೆ ಎರಡು ದ್ವಿಚಕ್ರ ವಾಹನಗಳಿಗೆ ಶಿವಮೊಗ್ಗ ಮೂಲದ ಟಿಟಿ ವಾಹನ ಡಿಕ್ಕಿ ಹೊಡೆದು ಪರಾರಿಯಾದ (ಹಿಟ್ & ರನ್) ಮಾಹಿತಿ ಬರುತ್ತಿದ್ದಂತೆ ಸುಳ್ಯ ಆ್ಯಂಬ್ಯುಲೆನ್ಸ್ ಚಾಲಕರ ಮಾಲಕರ ಸಂಘದ ಸದಸ್ಯ ಉನೈಸ್ ರವರು ಪೆರಾಜೆಯಲ್ಲಿ ಸಾರ್ವಜನಿಕರ ಸಹಕಾರದಿಂದ ತಡೆಹಿಡಿಯಲು ಯತ್ನಿಸಿದರೂ, ಅಲ್ಲಿ ನಿಲ್ಲಸದೇ ಬಂದ ವಾಹನವನ್ನು ಕೊನೆಗೆ ಸುಳ್ಯದಲ್ಲಿ ಪೋಲೀಸರು ಹಾಗೂ ಸಾರ್ವಜನಿಕರ ಸಹಕಾರದಿಂದ ತಡೆಹಿಡಿದಿದ್ದಾರೆ. ಸುಳ್ಯ ಆಂಬುಲೆನ್ಸ್ ಚಾಲಕ ಮಾಲಕ ಸಂಘದ ಉನೈಸ್ ಪೆರಾಜೆ, ಮಿಥುನ್, ಸಿದ್ದಿಕ್ ಹಾಗೂ ಶಮೀರ್ ಹಾಗೂ ಪ್ರಕಾಶ್ ಫೋಲೀಸ್ ಅವರಿಗೆ ಸಾರ್ಜಜನಿಕರು ಧನ್ಯವಾದ ಸಲ್ಲಿಸಿದ್ದಾರೆ.