ವಿಶ್ವಕ್ಕೆ ಶಾಂತಿ, ಸೌಹಾರ್ದತೆ, ಧಾರ್ಮಿಕತೆ, ಆಧ್ಯಾತ್ಮಿಕತೆಯ ಪ್ರಭೆಯನ್ನು ಪಸರಿಸಿದ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫಾ ﷺ ರ 1500ನೇ ಜನ್ಮದಿನವನ್ನು ಅತ್ಯಂತ ಸಂಭ್ರಮದಿಂದ ಆಚರಿಸುವ ತವಕದಲ್ಲಿದ್ದಾರೆ ವಿಶ್ವಾಸಿಗಳು.

ತ್ವೈಬಾ ಎಜ್ಯುಕೇಶನಲ್ ಸೆಂಟರ್ ಈಶ್ವರಮಂಗಳ ಈ ವರ್ಷ ವೈವಿಧ್ಯಮಯ ಕಾರ್ಯಕ್ರಮಗಳ ಯೋಜನೆಯನ್ನು ರೂಪಿಸಿದೆ. ಸಂಸ್ಥೆಯ ಪರಿಸರದ 30ರಷ್ಟು ಕೇಂದ್ರಗಳಲ್ಲಿ ಮೌಲಿದ್ ಸಂಚಾರಕ್ಕೆ ಸಫರ್ 1 ರಂದು ಚಾಲನೆ ನೀಡಲಾಗಿದೆ. ಇದು ಸಫರ್ ಕೊನೆಯ ತನಕ ಮುಂದುವರೆಯಲಿದೆ. ಘೋಷಣಾ ರ‍್ಯಾಲಿ,1500 ಮನೆಗಳಲ್ಲಿ ಮೌಲಿದ್ ಮಜ್ಲಿಸ್, ಆಗಸ್ಟ್ 24ರಂದು ನೌಫಲ್ ಸಖಾಫಿ ಕಳಸ ರವರಿಂದ ಬೃಹತ್ ಹುಬ್ಬುರ್ರಸೂಲ್ ಪ್ರಭಾಷಣ, ರೋಗಿಗಳಿಗೆ ಸ್ನೇಹಸ್ಪರ್ಶ, ಸಂಸ್ಥೆಯ ವಿದ್ಯಾರ್ಥಿಗಳಿಂದ ಖಲಮಿನ್ ಲಯಂ, ಇಷ್ಕೇ ತ್ವೈಬಾ ಮದ್ರಸಾ ಫೆಸ್ಟ್, ಬುರ್ದಾ ಮಜ್ಲಿಸ್, ಪ್ರಭಾತ ಮೌಲಿದ್, ರಬೀಉಲ್ ಅವ್ವಲ್ 1 ರಿಂದ 12 ತನಕ ಕೇರಳ ಮತ್ತು ಕರ್ನಾಟಕದ ಪ್ರಮುಖ ವಿದ್ವಾಂಸರಿಂದ ವಿವಿಧ ವಿಷಯಗಳ ಕೇಂದ್ರೀಕರಿಸಿ ಪ್ರಕೀರ್ತನಾ ಮಜ್ಲಿಸ್, ಕ್ಯಾಂಪ್ ಕ್ವಿಝ್ ನಡೆಯಲಿದೆ. ಖ್ಯಾತ ವಿದ್ವಾಂಸರುಗಳಾದ ಡಾ. ಉಮರುಲ್ ಫಾರೂಖ್ ಸಖಾಫಿ ಕೋಟ್ಟುಮಲ, ಇಬ್ರಾಹಿಂ ಸಖಾಫಿ ಪುಝಕ್ಕಾಟ್ಟಿರಿ, ಅನಸ್ ಅಮಾನಿ ಪುಷ್ಪಗಿರಿ, ಅಬ್ದುರ್ರಶೀದ್ ಝೈನಿ ಕಕ್ಕಿಂಜೆ, ಶಾಫಿ ಸಖಾಫಿ ಮುಂಡಂಬ್ರ, ರಹ್ಮತುಲ್ಲಾ ಸಖಾಫಿ ಎಳಮರಂ, ಸಜೀರ್ ಬುಖಾರಿ, ಎಸ್.ಪಿ ಹಂಝ ಸಖಾಫಿ ಬಂಟ್ವಾಳ,
ಸಯ್ಯಿದ್ ಅನ್ವರ್ ಸಾದಾತ್ ಸಅದಿ ಅಲ್ ಅರ್ಷದಿ ತ್ರಿಶೂರ್, ಅಬ್ದುರ್ರಶೀದ್ ಸಖಾಫಿ ಏಲಂಕುಳಂ,
ಮಜೀದ್ ಅರಿಯಲ್ಲೂರ್ ಕ್ರಮವಾಗಿ ಪ್ರವಾದಿﷺರ ಪ್ರಬೋಧನೆ ಮತ್ತು ನಿಯಮಗಳ ಸೌಂದರ್ಯ, ಪ್ರವಾದಿತ್ವದ ಬೌದ್ಧಿಕ ವಿಶ್ಲೇಷಣೆ, ಸೌಂದರ್ಯ ಪ್ರಸರಿಸಿದ ಶಮಾಯಿಲ್ ಗಳು, ಪ್ರವಾದಿﷺರನ್ನು ಓದಿದ ಜಗತ್ತು, ಖುರ್’ಆನ್ ವಚನಗಳಲ್ಲಿ ಪ್ರವಾದಿﷺರ ಪ್ರಕೀರ್ತನೆ, ಪ್ರವಾದಿತ್ವದ ಅಲೌಕಿಕ ಪುರಾವೆಗಳು, ಲಿಂಗತ್ವ ಸಿದ್ಧಾಂತಗಳ ಇನ್ನೊಂದು ಮುಖ, ಪ್ರಕೀರ್ತನೆಯನ್ನು ಅಳವಡಿಸಿ ಬದುಕಿದ ಮಹಾತ್ಮರು, ಮಿಲಾದ್ ಆಚರಣೆ; ಪುರಾವೆ ಆಧಾರಿತ ವಿಶ್ಲೇಷಣೆ, ಪ್ರವಾದಿﷺರ ಆರೋಗ್ಯದರ್ಶನ, ನಬಿಯ್ಯುರ್ರಹ್ಮ ವಿಷಯಗಳ ಕುರಿತು ಮಾತನಾಡಲಿದ್ದಾರೆ.

ಈ ಮೂಲಕ ಪ್ರವಾದಿﷺರನ್ನು ಕುರಿತು ಇನ್ನಷ್ಟು ತಿಳಿಯಲು ಉತ್ತಮ ಅವಕಾಶವನ್ನು ಸಂಸ್ಥೆ ಒದಗಿಸುತ್ತಿದೆ. ಸಾಧ್ಯವಿರುವ ಎಲ್ಲರೂ ಸದುಪಯೋಗಪಡಿಸಬೇಕಾಗಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಮಿಸ್ಬಾಹಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *