ಬೆಂಗಳೂರು ಅಗಸ್ಟ್ 18: ಸ್ಯಾಂಡಲ್ ವುಡ್ ನ ಟಿ ರಮ್ಯಾ ದರ್ಶನ ಕುರಿತಂತೆ ಹಾಕಿದ ಪೋಸ್ಟ್ ಗೆ ಅಶ್ಲೀಲವಾಗಿ ಕಮೆಂಟ್ ಮಾಡಿದ ಉಡುಪಿ ಮೂಲದ ಇಬ್ಬರನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
ಬಂಧಿತರನ್ನು ಉಡುಪಿ ಮೂಲದವರಾದ ಸುಜನ್ ಮತ್ತು ಆದರ್ಶ್ ಎಂದು ಗುರುತಿಸಲಾಗಿದೆ. ಇದಕ್ಕೂ ಮುನ್ನ ಸಿಸಿಬಿ ಪೊಲೀಸರು ಮಂಜುನಾಥ, ಭುವನ್ ಗೌಡ, ಪವನ್, ಓಬಣ್ಣ ಮತ್ತು ಗಂಗಾಧರ್ ಸೇರಿ ಒಟ್ಟು 9 ಯುವಕರನ್ನು ಬಂಧಿಸಿದ್ದರು. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ರೇಣುಕಾಸ್ವಾಮಿ ಕುಟುಂಬದ ಪರವಾಗಿ ನಿಂತ ಕಾರಣಕ್ಕೆ ನಟಿ ರಮ್ಯಾಗೆ ದರ್ಶನ್ ಅಭಿಮಾನಿಗಳು ಅಶ್ಲೀಲ ಮೆಸೇಜ್ ಕಳುಹಿಸಿದ್ದರು. ಇದರ ಬೆನ್ನಲ್ಲೇ ದರ್ಶನ್ ಫ್ಯಾನ್ಸ್ ವಿರುದ್ಧ ಗರಂ ಆದ ನಟಿ ಅಶ್ಲೀಲ ಮೆಸೇಜ್ ಕಳುಹಿಸಿದ್ದವರ ಖಾತೆಗಳನ್ನು ಬಹಿರಂಗಗೊಳಿಸಿದ್ದರು. ಜೊತೆಗೆ 43 ಅಕೌಂಟ್‌ಗಳ ವಿರುದ್ಧ ದೂರು ದಾಖಲಿಸಿದ್ದರು. ಇದರ ಬೆನ್ನಲ್ಲೇ ಕಿಡಿಗೇಡಿಗಳ ಪತ್ತೆಗಾಗಿ 6 ತಂಡವನ್ನ ರಚನೆ ಮಾಡಲಾಗಿತ್ತು.
ಈ ಕೇಸ್ ಬಗ್ಗೆ ರಮ್ಯಾ ಮಾತನಾಡಿದರು. ‘ಮೊದಲಿನ ರೀತಿ ಅಶ್ಲೀಲ ಸಂದೇಶಗಳು ಈಗ ಬರುತ್ತಿಲ್ಲ. ಉಳಿದಿರುವ ಇನ್ನಷ್ಟು ಜನರನ್ನು ಅರೆಸ್ಟ್ ಮಾಡಬೇಕಿದೆ. ನಾನು ದೂರು ಕೊಟ್ಟ ಬಳಿಕ ಒಂದು ಜಾಗೃತಿ ಮೂಡಿದೆ. ಎಷ್ಟೋ ಹೆಣ್ಣು ಮಕ್ಕಳು ನನಗೆ ಮೆಸೇಜ್ ಮಾಡಿದ್ದಾರೆ. ಈಗ ಅರೆಸ್ಟ್ ಆಗುತ್ತಿರುವುದರಿಂದ ಕೆಟ್ಟ ಕಮೆಂಟ್ ಮಾಡುವುದಕ್ಕೂ ಮುನ್ನ 10 ಸಾರಿ ಯೋಚನೆ ಮಾಡುತ್ತಾರೆ. ಟ್ರೋಲಿಂಗ್ ಕಡಿಮೆ ಆಗಿದೆ ಅಂತ ನನಗೆ ಹೆಣ್ಮಕ್ಕಳು ಹೇಳುತ್ತಿದ್ದಾರೆ’ ಎಂದಿದ್ದಾರೆ ರಮ್ಯಾ.