ಅಬುಧಾಬಿ: ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಉಲ್ಬಣಗೊಂಡಿರುವ ಬೆನ್ನಲ್ಲೇ, ಕೃತಕ ಬುದ್ಧಿಮತ್ತೆ (AI) ಬಳಸಿಕೊಂಡು ತಿರುಚಲಾದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಆರೋಪದ ಮೇಲೆ 19 ಮಂದಿ ಭಾರತೀಯರು ಸೇರಿದಂತೆ ಒಟ್ಟು 35 ಜನರ ಬಂಧನಕ್ಕೆ ಯುಎಇ ಸರ್ಕಾರ ಆದೇಶ ಹೊರಡಿಸಿದೆ.

​ಮಧ್ಯಪ್ರಾಚ್ಯದಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿರುವ ಮತ್ತು ಯುಎಇ ಮೇಲೆ ಇರಾನ್ ದಾಳಿ ಮುಂದುವರಿದಿರುವ ಈ ಸೂಕ್ಷ್ಮ ಸಂದರ್ಭದಲ್ಲಿ, ನಕಲಿ ಹಾಗೂ ತಿರುಚಿದ ವಿಡಿಯೋಗಳನ್ನು ಹರಡಿ ತಪ್ಪು ಮಾಹಿತಿ ಪಸರಿಸುವವರ ವಿರುದ್ಧ ಯುಎಇ ಆಡಳಿತವು ಈ ಕಠಿಣ ಕ್ರಮ ಕೈಗೊಂಡಿದೆ.

Leave a Reply

Your email address will not be published. Required fields are marked *